ಸಮಾಜ ಸೇವಾಭಾರ್ಗವ ಪ್ರಶಸ್ತಿಗೆ ಶಿಕ್ಷಕ ಈರಪ್ಪ ಸೊರಟೂರ ಆಯ್ಕೆ

Eerappa Soratura, Teacher Devasamudra
ಈರಪ್ಪ ಸೊರಟೂರ.
Published on

ಕಂಪ್ಲಿ: ತಾಲೂಕಿನ ದೇವಸಮುದ್ರ ಗ್ರಾಮದ ಸ.ಹಿ.ಪ್ರಾ. ಶಾಲೆ ಶಿಕ್ಷಕ ಈರಪ್ಪ ಸೊರಟೂರ ಹೊಸಪೇಟೆಯ ಸಂಗೀತಾ ಭಾರತಿ ಸಂಸ್ಥೆಯ ರಾಜ್ಯಮಟ್ಟದ ಸಮಾಜ ಸೇವಾಭಾರ್ಗವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸಮಾಜಶಾಸ್ತ್ರ ಸ್ನಾತಕೋತ್ತರ ಪದವಿಧರರಾದ ಇವರು, ಸಾಮಾಜಿಕ ಜಾಲತಾಣಗಳಲ್ಲಿ ಸೃಜನಶೀಲ ಕಲಾವಿದರಾಗಿದ್ದು, ಇವರ ನೂರಾರು ಹಾಸ್ಯ ವಿಡಿಯೋಗಳು ಜನಪ್ರಿಯವಾಗಿವೆ. ಚುಟುಕು, ಕವನ ಮತ್ತಿತರ ಸಾಹಿತ್ಯ ರಚನೆ ಮಾಡುವ ಇವರು, ಉಪನ್ಯಾಸ, ರಂಗಭೂಮಿ ಕಲೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಸರ್ಕಾರಿ ಗ್ರಾಮೀಣ ಶಿಕ್ಷಕರ ಸಂಘದ ಸಂಸ್ಥಾಪಕ ರಾಜ್ಯ ಉಪಾಧ್ಯಕ್ಷ, ಸಂಘಟನಾ ಕಾರ್ಯದರ್ಶಿಯಾಗಿ, ಕೆಎಸ್‌ಪಿಎಸ್‌ಟಿಎ ತಾಲೂಕು ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೂವಿನಹಡಗಲಿಯ ಬಹಗಾರರ ಸಂಘವು 2021ನೇ ಸಾಲಿನ ಸಾಹಿತ್ಯ ರತ್ನ ರಾಜ್ಯಪ್ರಶಸ್ತಿ ನೀಡಿ ಗೌರವಿಸಿದೆ. ಸೆ.25ರಂದು ಹೊಸಪೇಟೆಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net