ಕಂಪ್ಲಿಯಲ್ಲಿ ಒಂಟಿ ಮಹಿಳೆ ಸಾವು; ತಲೆಗೆಪೆಟ್ಟು ರಕ್ತದ ಮಡುವಿನಲ್ಲಿ ಶವಪತ್ತೆ, ಕೊಲೆ ಶಂಕೆ-ತನಿಖೆ ಶುರು

060920 Kampli Single Women Murder Investigation
ಕಂಪ್ಲಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾದ ಮಹಿಳೆ ಮನೆಗೆ ಎಎಸ್‌ಪಿ ಬಿ.ಎನ್.ಲಾವಣ್ಯ ಭೇಟಿ ನೀಡಿ ಮಹಿಳೆಯೊಬ್ಬರನ್ನು ವಿಚಾರಿಸಿದರು.
Published on

ಕಂಪ್ಲಿ: ಪಟ್ಟಣದ ರಾಮಲಿಂಗೇಶ್ವರ ದೇವಸ್ಥಾನ ಪಕ್ಕದಲ್ಲಿ ಇರುವ ಮನೆಯಲ್ಲಿ ಭಾನುವಾರ ಮಹಿಳೆ ಸಾವಿಗೀಡಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಧನಪಾಲ್ ಶಾರದಮ್ಮ(59) ಮೃತೆ. ಒಂಬತ್ತು ತಿಂಗಳ ಹಿಂದೆ ಪತಿ ಮೃತಪಟ್ಟಿದ್ದು, ಮನೆಯಲ್ಲಿ ಶಾರದಮ್ಮ ಒಬ್ಬರೇ ಇದ್ದರು.

ಕಿರಾಣಿ ಅಂಗಡಿ ನಡೆಸುತ್ತಿದ್ದರು. ಎಂದಿನಂತೆ ಭಾನುವಾರ ಬೆಳಗ್ಗೆ 7 ಗಂಟೆಗೆ ಮನೆಗೆಲಸಕ್ಕಾಗಿ ಪ್ರೇಮಲತಾ ಬಂದ ವೇಳೆ ಶಾರದಮ್ಮ ಸಾವಿನ ವಿಷಯ ಗೊತ್ತಾಗಿದೆ. ತಲೆಗೆ ಪೆಟ್ಟಾಗಿ ರಕ್ತದ ಮಡುವಿನಲ್ಲಿ ಇರುವುದನ್ನು ಕಂಡು ಪ್ರೇಮಲತಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಎಎಸ್‌ಪಿ ಬಿ.ಎನ್.ಲಾವಣ್ಯ ಹಾಗೂ ತಂಡ ಭೇಟಿ ನೀಡಿ ಪರಿಶೀಲಿಸಿತು. ನಂತರ ಮಾತನಾಡಿದ ಅವರು, ಮೇಲ್ನೋಟಕ್ಕೆ ಮಹಿಳೆ ಕೊಲೆ ಆಗಿರುವ ಸಾಧ್ಯತೆ ಇದೆ.

ಮರಣೋತ್ತರ ಪರೀಕ್ಷೆ, ಬೆರಳಚ್ಚು ತಜ್ಞರು ಮತ್ತು ಶ್ವಾನದಳ ತಂಡದ ವರದಿ, ತನಿಖಾ ವರದಿ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿ. ಸಿಪಿಐ ಡಿ.ಹುಲುಗಪ್ಪ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದೆ ಎಂದು ತಿಳಿಸಿದರು. ಹಂಪಿ ವಿಭಾಗದ ಡಿವೈಎಸ್ಪಿ ಎಸ್.ಎಸ್.ಕಾಶಿ, ಪಿಎಸ್‌ಐಗಳಾದ ಮೌನೇಶ್ ರಾಥೋಡ್, ಟಿ.ಎಲ್.ಬಸಪ್ಪ, ಬೆರಳಚ್ಚು ತಜ್ಞರಾದ ಸಂತೋಷ್‌ಕುಮಾರ್ ಆರ್.ವೈ., ಪ್ರಶಾಂತ್ ಕಾಳೆ, ಶ್ವಾನದಳದ ಹ್ಯಾಂಡ್ಲರ್ ವಿರೂಪಾಕ್ಷಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net