ಶ್ರೀ ಜಡೇಸಿದ್ಧ ಶಿವಯೋಗಿಗಳ ರಥೋತ್ಸವ ಅದ್ದೂರಿ

Kampli Jatre
ಎಮ್ಮಿಗನೂರು ಗ್ರಾಮದಲ್ಲಿ ಶ್ರೀ ಜಡೇಸಿದ್ಧ ಶಿವಯೋಗಿಗಳ ಮಹಾರಥೋತ್ಸವ ಭಾನುವಾರ ಜರುಗಿತು.
Published on

ಕಂಪ್ಲಿ: ಎಮ್ಮಿಗನೂರು ಗ್ರಾಮದ ಆರಾಧ್ಯದೈವ ಶ್ರೀ ಜಡೇಸಿದ್ಧ ಶಿವಯೋಗಿಗಳ ಮಹಾರಥೋತ್ಸವ ಭಾನುವಾರ ಅದ್ದೂರಿಯಾಗಿ ಜರುಗಿತು.

ರಥೋತ್ಸವದಲ್ಲಿ ಕಳಸಾದಾರತಿ, ಮಂಗಳವಾದ್ಯ, ತಾಷಾರಾಂಡೋಲ್, ಜನಪದ ಕಲಾವಿದರ ನೃತ್ಯ ಗಮನ ಸೆಳೆಯಿತು.

ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ರಥದ ಕಲಶಕ್ಕೆ ಉತ್ತತ್ತಿ, ಬಾಳೆಹಣ್ಣು, ಹೂ, ಪತ್ರಿ ಎಸೆದು ಭಕ್ತಿ ಸಮರ್ಪಿಸಿದರು. ಜಡೇಸಿದ್ಧ ಶಿವಯೋಗಿಗಳ ಕರ್ತೃ ಗದ್ದುಗೆಯನ್ನು ಫಲಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net