

ಕಂಪ್ಲಿ: ಶ್ರಾವಣ ಮಾಸದ ಅಂಗವಾಗಿ ಪಟ್ಟಣದಲ್ಲಿ ಎಮ್ಮಿಗನೂರು ಜಡಿಸಿದ್ಧ ಶಿವಯೋಗಿಗಳ ಪುರಾಣ ಮಹಮಂಗಲ, ಭಾವಚಿತ್ರ ಮೆರವಣಿಗೆ ಶ್ರದ್ಧೆಭಕ್ತಿಗಳಿಂದ ಬುಧವಾರ ಜರುಗಿತು.
ಇದಕ್ಕೂ ಮುನ್ನ ನಂದಿ ಈಶ್ವರ, ಗುರುಸಿದ್ಧಮರಿ ದೇವರು, ಬೊಚ್ಚಯ್ಯ ಸ್ವಾಮಿಗಳ ಕತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ ನೆರವೇರಿತು. ನಂತರ ಜಂಗಮ ಗಣರಾಧನೆ, ಅನ್ನಸಂತರ್ಪಣೆ ನಡೆಯಿತು.
ಪುರಾಣ ಪ್ರಸ್ತುತಪಡಿಸಿದ ಎಂ.ಶರಣಯ್ಯಶಾಸ್ತ್ರಿ ಕಂಬಳದಿನ್ನಿ, ಸಂಗೀತ ಸೇವೆ ಸಲ್ಲಿಸಿದ ಬಿ.ಚಿದಾನಂದಪ್ಪ ಗವಾಯಿ, ತಬಲವಾದಕ ಕೆ.ದೊಡ್ಡಬಸಪ್ಪ ಸೇರಿ ನಾನಾ ಸೇವೆ ಸಲ್ಲಿಸಿದವರನ್ನು ಗೌರವಿಸಲಾಯಿತು.
ಸಾಂಗತ್ರಯ ಸಂಸ್ಕೃತ ಪಾಠಶಾಲಾ ಅಧ್ಯಕ್ಷ ಇಟಗಿ ಬಸವರಾಜಗೌಡ, ಪದಾಧಿಕಾರಿಗಳಾದ ಅಲಬನೂರು ಬಸವರಾಜ, ಬಿ.ಎಚ್.ಶಶಿಧರಗೌಡ, ಗಂಡಿ ಗಣೇಶ, ಟಿ.ಸುರೇಶಗೌಡ, ಅರವಿ ಅಮರೇಶಗೌಡ, ಡಾ.ಜಗನ್ನಾಥ ಹಿರೇಮಠ, ಯುಗಾದಿ ಬಸವರಾಜ, ಗೌಳೇರ ಶೇಖರಪ್ಪ, ಅಳ್ಳಿ ನಾಗರಾಜ, ಕೋರಿಶೆಟ್ರು ಸಣ್ಣ ಶಿವಪ್ಪ, ಹುಲಿಹೈದರ ಅಮರೇಶ, ಎಂ.ವಿಜಯಕುಮಾರ, ಕುಕನೂರ ಅಶೋಕ, ಸಜ್ಜನ ಶರಣಪ್ಪ, ಘನಮಠದಯ್ಯ ಹಿರೇಮಠ ಸೇರಿ ವೀರಶೈವ ಸಮುದಾಯದವರಿದ್ದರು.