ಶ್ರಾವಣ ಮಾಸದ ಭಜನೆ ಮಹಾಮಂಗಲ

kampli bhajane
ರಾಮಸಾಗರ ಬಳಿಯ ಪಂಪಾವಿದ್ಯಾಪೀಠದ ಸತ್ಯಗಣಪತಿ ದೇವಸ್ಥಾನದಲ್ಲಿ ಭಜನೆ ಮಹಾಮಂಗಲಗೊಂಡಿತು. ಪ್ರಮುಖರಾದ ಕೆ.ಎಂ. ಹೇಮಯ್ಯಸ್ವಾಮಿ, ಅರವಿ ಬಸವನಗೌಡ, ಎಸ್.ಎಸ್.ಎಂ.ಚನ್ನಯ್ಯಸ್ವಾಮಿ, ಹೊನ್ನಪ್ಪ, ಪಾಮಯ್ಯ ಶರಣರು ಇತರರಿದ್ದರು.
Published on

ಕಂಪ್ಲಿ: ರಾಮಸಾಗರ ಬಳಿಯ ಪಂಪಾವಿದ್ಯಾಪೀಠದ ಸತ್ಯಗಣಪತಿ ದೇವಸ್ಥಾನದಲ್ಲಿ ಭಾನುವಾರ ಕೂಲಿಕಟ್ಟೆ ಬಸವೇಶ್ವರ, ಪೇಟೆ ಬಸವೇಶ್ವರ ಭಜನಾ ಮಂಡಳಿಗಳ ಶ್ರಾವಣ ಮಾಸದ ಭಜನಾ ಕಾರ್ಯಕ್ರಮ ಮಹಾಮಂಗಲಗೊಂಡಿತು.

ಸತ್ಯಗಣಪತಿ, ಬಸವೇಶ್ವರ ದೇವರ ಪಂಚಾಮೃತ ಅಭಿಷೇಕ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ, ಕೂಲಿಕಟ್ಟೆ ಬಸವೇಶ್ವರ ಮತ್ತು ಪೇಟೆ ಬಸವೇಶ್ವರ ಭಜನಾ ಮಂಡಳಿಗಳ ಭಜನಾ ವೃಂದವರು ಭಜನೆ ಮಾಡಿದರು.

ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಪ್ರಮುಖರಾದ ಕೆ.ಎಂ.ಹೇಮಯ್ಯಸ್ವಾಮಿ, ಅರವಿ ಬಸವನಗೌಡ, ಎಸ್.ಎಸ್.ಎಂ.ಚನ್ನಯ್ಯಸ್ವಾಮಿ, ಎಲಿಗಾರ ವೆಂಕಟರೆಡ್ಡಿ, ಜವುಕಿನ ಸತೀಶ್, ಯು.ಎಂ.ವಿದ್ಯಾಶಂಕರ್, ಅಲಬನೂರು ಬಸವರಾಜ, ಎಸ್.ಬಂಡೆಯ್ಯಸ್ವಾಮಿ, ಹೊನ್ನಪ್ಪ, ಗೌಳೇರು ಶೇಖರಪ್ಪ, ಪಾಮಯ್ಯ ಶರಣರು, ಶರಣಪ್ಪ, ಷಣ್ಮುಖಪ್ಪ ಚಿತ್ರಗಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net