ಆತ್ಮ ಜ್ಞಾನ ಪಡೆಯಲು ಮುಂದಾಗಿ

kmp-2
ಕಂಪ್ಲಿಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್‌ನಿಂದ ಹಮ್ಮಿಕೊಂಡಿದ್ದ 180ನೇ ಮಹಾಮನೆ ಕಾರ್ಯಕ್ರಮದಲ್ಲಿ ಮಣ್ಣೂರಿನ ಕೃಷಿಕ ತಳವಾರ ಈರಣ್ಣ ಉಪನ್ಯಾಸ ನೀಡಿದರು. ಪ್ರಮುಖರಾದ ಜಿ.ಪ್ರಕಾಶ್, ಭತ್ತದ ಸಂಧ್ಯಾ, ಕೆ.ಎಂ.ಹೇಮಯ್ಯಸ್ವಾಮಿ, ಘನಮಠಯ್ಯ ಹಿರೇಮಠ ಇತರರಿದ್ದರು.
Published on

ಕಂಪ್ಲಿ: ಪುಣ್ಯ, ಪರೋಪಕಾರ ಕಾರ್ಯಗಳಿಂದ ಮುಕ್ತಿ ದೊರಕಲು ಸಾಧ್ಯ ಎಂದು ಮಣ್ಣೂರಿನ ಕೃಷಿಕ ತಳವಾರ ಈರಣ್ಣ ಹೇಳಿದರು.

ಪಟ್ಟಣದ ಅಕ್ಕಮಹಾದೇವಿ ಮಹಿಳಾ ಮಂಡಳಿಯ ಅನುಭವ ಮಂಟಪದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್‌ನಿಂದ ಶನಿವಾರ ಹಮ್ಮಿಕೊಂಡಿದ್ದ 180ನೇ ಮಹಾಮನೆ ಕಾರ್ಯಕ್ರಮದಲ್ಲಿ ‘ಶರಣರ ವಿಚಾರಧಾರೆ’ ಕುರಿತು ಉಪನ್ಯಾಸ ನೀಡಿ, ಶರಣರ ವಚನ ಸಂಸ್ಕೃತಿಯಂತೆ ಸತ್ಸಂಗದಲ್ಲಿ ತೊಡಗಿಕೊಳ್ಳಬೇಕು. ಆತ್ಮ ಜ್ಞಾನವೇ ಅತ್ಯಂತ ಶ್ರೇಷ್ಠವಾಗಿದ್ದು, ಆತ್ಮಜ್ಞಾನ ಗಳಿಸುವಲ್ಲಿ ಮುಂದಾಗಬೇಕು ಎಂದರು.

ಸಾಂಗತ್ರಯ ಸಂಸ್ಕೃತ ಪಾಠಶಾಲೆ ಪ್ರಾಚಾರ್ಯ ಘನಮಠಯ್ಯ ಹಿರೇಮಠ ಮಾತನಾಡಿ, ಮಕ್ಕಳಿಗೆ ಬಾಲ್ಯದಲ್ಲಿಯೇ ವಚನಗಳನ್ನು ಕಂಠಪಾಠ ಮಾಡಿಸಿ, ಅವುಗಳ ಮೌಲ್ಯ ತಿಳಿಸಿಕೊಟ್ಟಲ್ಲಿ ಭವಿಷ್ಯದಲ್ಲಿ ಉತ್ತಮ ಜೀವನ ಸಾಗಿಸಬಲ್ಲರು ಎಂದರು.

ಪರಿಷತ್ತಿನ ತಾಲೂಕು ಅಧ್ಯಕ್ಷ ಜಿ.ಪ್ರಕಾಶ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಕ.ಮ.ಹೇಮಯ್ಯಸ್ವಾಮಿ, ಅಕ್ಕಮಹಾದೇವಿ ಮಹಿಳಾ ಮಂಡಳಿ ಉಪಾಧ್ಯಕ್ಷೆ ಭತ್ತದ ಸಂಧ್ಯಾ, ಕಾರ್ಯದರ್ಶಿ ಬಿ.ಎಂ.ಪುಷ್ಪಾ, ಪಾಠಶಾಲೆ ನಿವೃತ್ತ ಪ್ರಾಚಾರ್ಯ ಎಂ.ಎಸ್.ಶಶಿಧರಶಾಸ್ತ್ರಿ, ಪರಿಷತ್ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪದಾಧಿಕಾರಿಗಳಾದ ಎಸ್.ಡಿ.ಬಸವರಾಜ, ಅಶೋಕ ಕುಕನೂರು, ಎಲಿಗಾರ ವೆಂಕಟರೆಡ್ಡಿ, ಎಸ್.ಶಾಮಸುಂದರ ರಾವ್, ಕೆ.ಚಂದ್ರಶೇಖರ, ಸಜ್ಜೇದ ವೀರಭದ್ರಪ್ಪ, ಯು.ಎಂ.ವಿದ್ಯಾಶಂಕರ, ಬಡಿಗೇರ ಜಿಲಾನ್‌ಸಾಬ್, ಪಾಮಯ್ಯ ಶರಣರು, ಕ.ಯಂಕಾರೆಡ್ಡಿ, ಎಚ್.ನಿಂಗೇಶ, ಮಾ. ಶ್ರೀನಿವಾಸ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net