

ಕಂಪ್ಲಿ: ಮಕ್ಕಳಿಗೆ ಆತ್ಮರಕ್ಷಣೆಗಾಗಿ ಕರಾಟೆ ಕಲೆ ಕಲಿಸುವಲ್ಲಿ ಪಾಲಕರು ಮುಂದಾಗಬೇಕು ಎಂದು ಇಲ್ಲಿನ ಎಂ.ಕೆ.ಕರಾಟೆ ಸ್ಪೋರ್ಟ್ಸ್ ಅಸೋಸಿಯೇಷನ್ ತರಬೇತುದಾರರಾದ ಕೇದಾರನಾಥ, ಎಂ.ಡಿ.ಮಹಮ್ಮದ್ ಗೌಸ್ ಹೇಳಿದರು.
ಇಲ್ಲಿನ ಷಾ.ಮಿಯಾಚಂದ್ ಸರ್ಕಾರಿ ಪಿಯು ಕಾಲೇಜಿನಲ್ಲಿ ಮಕ್ಕಳಿಗೆ ಸೋಮವಾರ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಆತ್ಮರಕ್ಷಣೆ ಕಲೆಯ ಅವಶ್ಯಕತೆ ಹೆಚ್ಚುತ್ತಿದೆ. ಆತ್ಮರಕ್ಷಣೆ ಜತೆ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಕರಾಟೆ ಸಹಕಾರಿ. ಕಳೆದ ಇಪ್ಪತ್ತು ವರ್ಷಗಳಿಂದ ನಿತ್ಯ ಬೆಳಗ್ಗೆ 6 ಗಂಟೆಯಿಂದ ಉಚಿತವಾಗಿ ಮಕ್ಕಳಿಗೆ ಕರಾಟೆ ಕಲಿಸಿಕೊಡಲಾಗುತ್ತಿದೆ. ಅನೇಕರು ಕರಾಟೆ ತರಬೇತುದಾರರಾಗಿದ್ದಾರೆ ಎಂದರು.
ಗಂಗಾವತಿಯ ಡ್ರೀಮ್ ವರ್ಲ್ಡ್ ಮಾರ್ಷಲ್ ಆರ್ಟ್ ಟ್ರಸ್ಟ್ ಭಾನುವಾರ ಹಮ್ಮಿಕೊಂಡಿದ್ದ 7ನೇ ಅಖಿಲ ಭಾರತ ಮುಕ್ತ ಕರಾಟೆ ಚಾಂಪಿಯನ್‌ಷಿಪ್ ಸ್ಪರ್ಧೆಯಲ್ಲಿ ನಮ್ಮ ಸಂಸ್ಥೆಯ 18ಮಕ್ಕಳು ಪಾಲ್ಗೊಂಡಿದ್ದು, ಪ್ರಥಮ 10, ದ್ವೀತಿಯ 5 ಹಾಗೂ ತೃತೀಯ ಸ್ಥಾನವನ್ನು ಮೂವರು ಗಳಿಸಿದ್ದಾರೆ ಎಂದರು. ಮಕ್ಕಳಿಗೆ ಪ್ರಮಾಣಪತ್ರ, ಟ್ರೋಫಿ ವಿತರಿಸಲಾಯಿತು.
ಹಿರಿಯ ವಿದ್ಯಾರ್ಥಿಗಳಾದ ನೂರ್‌ಬಾಷಾ, ಕೆ.ರಾಜಶೇಖರ್ ಇದ್ದರು.