ಆತ್ಮರಕ್ಷಣೆ ಕಲೆ ಕಲಿಯಲು ಮುಂದಾಗಿ

Kampli Karate
ಕರಾಟೆ ಸ್ಪರ್ಧೆಯಲ್ಲಿ ವಿಜೇತರಾದ ಕಂಪ್ಲಿಯ ಎಂ.ಕೆ.ಕರಾಟೆ ಸ್ಪೋರ್ಟ್ಸ್ ಅಸೋಸಿಯೇಷನ್ ಮಕ್ಕಳಿಗೆ ಪ್ರಮಾಣಪತ್ರ, ಬಹುಮಾನ ವಿತರಿಸಲಾಯಿತು. ತರಬೇತುದಾರ ಕೆ.ಕೇದಾರನಾಥ್, ವಿದ್ಯಾರ್ಥಿಗಳಾದ ಭಾರತಿ, ಬಾಲಾಜಿ, ಕೀರ್ತನಾ, ಹೇಮಾದ್ರಿ, ದಕ್ಷಿತ್ ಇತರರಿದ್ದರು.
Published on

ಕಂಪ್ಲಿ: ವಿದ್ಯಾರ್ಥಿಗಳು ಆತ್ಮರಕ್ಷಣೆ ಕಲೆ ಕಲಿಯಲು ಮುಂದಾಗಬೇಕು ಎಂದು ಇಲ್ಲಿನ ಎಂ.ಕೆ.ಕರಾಟೆ ಸ್ಪೋರ್ಟ್ಸ್ ಅಸೋಸಿಯೇಷನ್ ತರಬೇತುದಾರ ಕೆ.ಕೇದಾರನಾಥ್ ಹೇಳಿದರು.

ಪಟ್ಟಣದ ಷಾ.ಮಿಯಾಚಂದ್ ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿ ಭಾನುವಾರ ಎಂ.ಕೆ.ಕರಾಟೆ ಸ್ಪೋರ್ಟ್ಸ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ಷಾ.ಮಿಯಾಚಂದ್ ಮೈದಾನದಲ್ಲಿ ನಿತ್ಯ ಬೆಳಗ್ಗೆ 6ಗಂಟೆಗೆ ಕರಾಟೆಯೊಂದಿಗೆ ಆತ್ಮರಕ್ಷಣಾ ಕಲೆಗಳನ್ನು ಉಚಿತವಾಗಿ ಕಲಿಸಲಾಗುತ್ತಿದ್ದು ಪಾಲಕರು ಮಕ್ಕಳನ್ನು ಸೇರಿಸಬೇಕು ಎಂದರು.

ಇದಕ್ಕೂ ಮುನ್ನ ಆ.26ರಂದು ಬಳ್ಳಾರಿಯಲ್ಲ್ಲಿ ಜರುಗಿದ ಟ್ರೆಡಿಷನಲ್ ಶೂಟೋಕಾನ್ ಕರಾಟೆ ಅಕಾಡೆಮಿ ಕರ್ನಾಟಕ-2023ರ 2ನೇ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಎಂ.ಕೆ.ಕರಾಟೆ ಸ್ಪೋರ್ಟ್ಸ್ ಅಸೋಸಿಯೇಷನ್‌ನ ಏಳು ವಿದ್ಯಾರ್ಥಿಗಳು ಪ್ರಥಮ, ನಾಲ್ವರು ದ್ವಿತೀಯ ಹಾಗೂ 6 ಜನ ತೃತೀಯ ಸ್ಥಾನಗಳಿಸಿದ್ದು, ಅವರಿಗೆ ಪ್ರಮಾಣಪತ್ರ, ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net