ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷರ ಬಿಡುಗಡೆಗೊಳಿಸಿ - ಕಂಪ್ಲಿಯಲ್ಲಿ ಪದಾಧಿಕಾರಿಗಳ ಪ್ರತಿಭಟನೆ

KAMPLI 03
Published on

ಕಂಪ್ಲಿ: ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಅವರನ್ನು ಅಕ್ರಮವಾಗಿ ಬಂಧಿಸಲಾಗಿದ್ದು, ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪಕ್ಷದ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು.

ಕ್ಷೇತ್ರ ಅಧ್ಯಕ್ಷ ಎಂ.ರಫಿಕ್ ಮಾತನಾಡಿ, ಕೇಂದ್ರ ಸರ್ಕಾರದ ದೃಷ್ಟಿ ವಕ್ಫ್ ಆಸ್ತಿ ಮೇಲಿದ್ದು, ಅದನ್ನು ಕಬಳಿಸಲು ಸಂಚು ನಡೆಸಿದೆ. ಮುಸ್ಲಿಮರನ್ನು ಹತ್ತಿಕ್ಕಲು ಇನ್ನಿಲ್ಲದ ಪ್ರಯತ್ನ ಮಾಡಲಾಗುತ್ತಿದೆ. ಕೇಂದ್ರದ ಬೆದರಿಕೆಗೆ ಹೆದರುವುದಿಲ್ಲ. ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷರ ಬಂಧನ ಅನ್ಯಾಯದ ಪರಮಾವಧಿಯಾಗಿದೆ. ಕೂಡಲೇ ಅವರನ್ನು ಬಂಧನದಿಂದ ಮುಕ್ತಗೊಳಿಸಬೇಕು. ಇರದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಪದಾಧಿಕಾರಿಗಳಾದ ಎಂ.ಇಮ್ರಾನ್‌ಖಾನ್, ಕೆ.ಮೆಹಬೂಬ್ ದೌಲ, ಆಶಿಫ್, ಹುಸೇನ್, ರಾಜಾವಲಿ, ದಸ್ತಗಿರಿ,ಇಮ್ರಾನ್ ನಜೀರ್, ಅಬೂಬಕ್ಕರ್, ಅಕ್ಬರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net