ಕಪ್ಪುಬಾವುಟ ಪ್ರದರ್ಶಿಸಿ ಸರ್ಕಾರಕ್ಕೆ ಎಚ್ಚರಿಕೆ

200622 Kampli reservation increase fight action committee meeting
ಕಂಪ್ಲಿಯಲ್ಲಿ ನಡೆದ ಪಜಾತಿ, ಪಪಂ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ಮುಖಂಡರ ಸಂಘಟನಾ ಸಭೆಯಲ್ಲಿ ತಾಲೂಕು ಅಧ್ಯಕ್ಷ ರಾಮಸಾಗರ ಬಿ.ನಾರಾಯಣಪ್ಪ ಮಾತನಾಡಿದರು.
Published on

ಕಂಪ್ಲಿ: ಎಸ್ಸಿ, ಎಸ್ಟಿಯವರಿಗೆ ಮೀಸಲು ಹೆಚ್ಚಳ ಮಾಡದಿರುವ ಸಿಎಂ ಬಸವರಾಜ ಬೊಮ್ಮಾಯಿ ಕಾರ್ಯಕ್ರಮದಲ್ಲಿ ಕಪ್ಪುಬಾವುಟ ಪ್ರದರ್ಶಿಸಲಾಗುವುದು ಎಂದು ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ತಾಲೂಕು ಅಧ್ಯಕ್ಷ ರಾಮಸಾಗರ ಬಿ.ನಾರಾಯಣಪ್ಪ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ಜರುಗಿದ ಕ್ರಿಯಾಸಮಿತಿ ಮುಖಂಡರ ಸಂಘಟನಾಸಭೆಯಲ್ಲಿ ಮಾತನಾಡಿದರು. ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಶ್ರೀಗಳು ಮೀಸಲು ಹೆಚ್ಚಳಕ್ಕೆ ನಡೆಸುತ್ತಿರುವ ಹೋರಾಟಕ್ಕೆ ಪ್ರತಿಸ್ಪಂದನೆ ದೊರೆತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಭೆಯಲ್ಲಿ ಪ್ರಮುಖರಾದ ಡಿ.ಯಲ್ಲಪ್ಪ, ಬಿ.ಅಂಬಣ್ಣ, ಡಾ.ವೆಂಕಟೇಶ್, ಎನ್.ರಾಮಾಂಜನೇಯಲು, ವಿ.ಶೇಖಪ್ಪ, ಡ್ರೈವರ್ ಈರಣ್ಣ, ಮರೆಣ್ಣ ನಾಯಕ, ಫೈಲಾನ್ ಈರಣ್ಣ, ಬಿ.ವೆಂಕಟೇಶ್, ಬಿ.ಬಸಪ್ಪ, ನೀರಗಂಟಿ ವೀರೇಶ್, ಎನ್.ದುರ್ಗಪ್ಪ, ಮರೆಣ್ಣ ನಾಯಕ, ಕೆ.ಲಕ್ಷ್ಮಣ, ಎನ್.ಮಂಜುನಾಥ, ಲೋಕೇಶ್, ವಿ.ಮರಿಲಿಂಗಪ್ಪ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net