

ಕಂಪ್ಲಿ: ಸಣಾಪುರ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನಿಂದ ಬುಧವಾರ ಜ್ಞಾನವಿಕಾಸ ಸೃಜನಶೀಲ ಕಾರ್ಯಕ್ರಮ ನಡೆಯಿತು.
ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಜ್ಯೋತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕೃಷಿ ಕುರಿತ ಮಾಹಿತಿ ನೀಡಲು ರೈತ ಸಂಪರ್ಕ ಕೇಂದ್ರವಿದ್ದು ರೈತರು ಸದುಪಯೋಗಪಡಿಸಿಕೊಳ್ಳಬೇಕು. ಎರೆಹುಳು, ಕಾಂಪೊಸ್ಟ್ ಗೊಬ್ಬರ ಬಳಕೆ ಮಾಡಲು ಮುಂದಾಗಬೇಕು ಎಂದರು. ಟ್ರಸ್ಟ್‌ನ ಕೃಷಿ ಮೇಲ್ವಿಚಾರಕ ಸಂಜುಕುಮಾರ್ ಮಾತನಾಡಿ, ಮನೆ ಅಂಗಳ, ಹಿತ್ತಲಿನಲ್ಲಿ ಕೈತೋಟ ಬೆಳೆಸುವ ಮೂಲಕ ಮನೆಗೆ ಅಗತ್ಯವಿರುವ ತರಕಾರಿ, ಸೊಪ್ಪು, ಔಷಧ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾವಯವ ಗೊಬ್ಬರ ತಯಾರಿಸಲು 6 ಅಡಿ ಅಗಲ, 5 ಅಡಿ ಉದ್ದದ ಪಿವಿಸಿ ಪೈಪ್‌ಗಳನ್ನು 15 ರೈತ ಫಲಾನುಭವಿಗಳಿಗೆ ಉಚಿತವಾಗಿ ವಿತರಿಸಲಾಯಿತು. ಆರೋಗ್ಯ ಸಹಾಯಕ ಅಂಗಡಿ ಬಸವರಾಜ, ಸಮನ್ವಯಾಧಿಕಾರಿ ರೇಖಾ, ಪ್ರಮುಖರಾದ ಕೊಟ್ರಮ್ಮ, ಈರಮ್ಮ, ಶಿಲ್ಪಾ, ದೊಡ್ಡ ಈರಮ್ಮ, ದಾಕ್ಷಾಯಿಣಿ, ಚೈತ್ರಾಇತರರಿದ್ದರು.