ವೀರಭದ್ರೇಶ್ವರ ಭಾವಚಿತ್ರ ಮೆರವಣಿಗೆ

30082022 kmp jatra
Published on

ಕಂಪ್ಲಿ: ತಾಲೂಕಿನ ಸಣಾಪುರ ಗ್ರಾಮದಲ್ಲಿ ಭಾದ್ರಪದ ಮಾಸದ ಮೊದಲ ಮಂಗಳವಾರ ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ ನಿಮಿತ್ತ ಶ್ರೀವೀರಭದ್ರೇಶ್ವರ ದೇವರ ಭಾವಚಿತ್ರ ಮೆರವಣಿಗೆ ಶ್ರದ್ಧಾಭಕ್ತಿಗಳಿಂದ ಜರುಗಿತು. ಉದ್ಭವ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭಗೊಂಡು ಪ್ರಮುಖ ಬೀದಿಗಳಿಂದ ಸಾಗಿತು. ಮೆರವಣಿಗೆಯಲ್ಲಿ ತಾಷಾರಾಂಡೋಲು, ಸಮಾಳ, ನಂದಿಕೋಲು, ಕಳಸ, ವೀರಗಾಸೆ ಸೇರಿ ಜನಪದ ಕಲಾವಿದರು ಪಾಲ್ಗೊಂಡಿದ್ದರು. ಮಹಾರುದ್ರಾಭಿಷೇಕ, ಅನ್ನಸಂತರ್ಪಣೆ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮ ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net