

ಕಂಪ್ಲಿ: ಪಟ್ಟಣದ ರಸ್ತೆ ಅಭಿವೃದ್ಧಿಗೊಳಿಸುವಂತೆ ಒತ್ತಾಯಿಸಿ ನವ ಕರ್ನಾಟಕ ಯುವಶಕ್ತಿ ತಾಲೂಕು ಘಟಕದ ಪದಾಧಿಕಾರಿಗಳು ಶಾಸಕ ಜೆ.ಎನ್.ಗಣೇಶ್‌ಗೆ ಸೋಮವಾರ ಮನವಿ ಸಲ್ಲಿಸಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ವಿರೂಪಾಕ್ಷಿ ಯಾದವ್ ಮಾತನಾಡಿ, ಪಟ್ಟಣದ ನಾಡಕಚೇರಿಯಿಂದ ಕೊಟ್ಟಾಲ್ ಪೆಟ್ರೋಲ್ ಬಂಕ್‌ವರೆಗಿನ ರಸ್ತೆ ಹಾಗೂ ಹೊಸ ಬಸ್ ನಿಲ್ದಾಣದಿಂದ ನಂ.10ಮುದ್ದಾಪುರ ಹೊರವಲಯದ ಸಿದ್ದೇಶ್ವರ ಕ್ರಾಸ್ ವರೆಗಿನ ಮಾರ್ಗ ಸಂಪೂರ್ಣ ಹದಗೆಟ್ಟಿದ್ದು, ಬೈಕ್ ಸವಾರರು ಆಯತಪ್ಪಿ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಕೂಡಲೇ ರಸ್ತೆಗಳ ಅಭಿವೃದ್ಧಿಗೆ ಮುಂದಾಗುವಂತೆ ಶಾಸಕರಲ್ಲಿ ಮನವಿ ಮಾಡಿದರು.
ಸಂಘಟನೆಯ ತಾಲೂಕು ಅಧ್ಯಕ್ಷ ಜೆ.ಶಿವಕುಮಾರ್, ಪದಾಧಿಕಾರಿಗಳಾದ ಎಸ್.ಗೋಪಾಲ್, ಜಿ.ಕೆ.ರಾಘವೇಂದ್ರ, ಯು.ಹೊನ್ನೂರಸ್ವಾಮಿ, ಸಂತೋಷಕುಮಾರ್, ಪ್ರಹ್ಲಾದನಾಯಕ, ಕೆ.ಶಬ್ಬೀರ್, ಸಂತೋಷ್, ಮಲ್ಲಪ್ಪ, ಕಂಠೆಪ್ಪ, ಬಿ.ರಮೇಸ್, ಬಸವರಾಜ್, ವೈ.ಮಲ್ಲಿಕಾರ್ಜುನ ಇತರರಿದ್ದರು.