

ಕಂದಾಯ ದಿನಾಚರಣೆ ಕಾರ್ಯಕ್ರಮ
ಕಂಪ್ಲಿ: ದೇಶದ ಅಭಿವೃದ್ಧಿಯಲ್ಲಿ ಕಂದಾಯ ಇಲಾಖೆಯ ಪಾತ್ರ ಪ್ರಮುಖವಾಗಿದೆ ಎಂದು ತಹಸೀಲ್ದಾರ್ ಗೌಸಿಯಾಬೇಗಂ ಹೇಳಿದರು.
ಇಲ್ಲಿನ ತಹಸಿಲ್ ಕಚೇರಿ ಆವರಣದಲ್ಲಿ ಶುಕ್ರವಾರ ಜರುಗಿದ ಕಂದಾಯ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಜನರ ಸಂಕಷ್ಟಗಳಿಗೆ ತಕ್ಷಣ ಪ್ರತಿಕ್ರಯಿಸುವ ಮೂಲಕ ಜನಸ್ನೇಹಿ ಇಲಾಖೆಯಾಗಿದೆ. ಭೂಮಿ ಕೇಂದ್ರ ನಿರ್ವಹಣೆಯಲ್ಲಿ ರಾಜ್ಯಕ್ಕೆ ಕಂಪ್ಲಿ ತಾಲೂಕಿನ ಕಂದಾಯ ಇಲಾಖೆ ಮೂರನೇ ಸ್ಥಾನ ಗಳಿಸಿದೆ. ಗ್ರಾಮ ಲೆಕ್ಕಾಧಿಕಾರಿಗಳಿಗೆ ಜಿಲ್ಲಾ ಮಟ್ಟದ ಸರ್ವೋತ್ತಮ ಪ್ರಶಸ್ತಿ ದೊರಕಿದ್ದು ಕಂಪ್ಲಿ ಕಂದಾಯ ಇಲಾಖೆಯ ಹೆಗ್ಗಳಿಕೆಯಾಗಿದೆ ಎಂದರು.
ಉಪ ತಹಸೀಲ್ದಾರ್ ಬಿ.ರವೀಂದ್ರಕುಮಾರ್ ಮಾತನಾಡಿ, ರೈತರಿಂದ ಸಕಾಲಕ್ಕೆ ಕರ ವಸೂಲಿ ಮಾಡಿಕೊಡುವಲ್ಲಿ ಕಂದಾಯ ಇಲಾಖೆ ಮುಂಚೂಣಿಯಲ್ಲಿದೆ. 72 ತಾಸುಗಳಲ್ಲಿ ಪಿಂಚಣಿ ನೀಡುವ, ಕಂದಾಯ ಇಲಾಖೆ ಮನೆಬಾಗಿಲಿಗೆ, ಗ್ರಾಮ ವಾಸ್ತವ್ಯದ ಮೂಲಕ ಸಕಾಲದಲ್ಲಿ ಜನರಿಗೆ ಸೇವೆ ಒದಗಿಸುವಲ್ಲಿ ಕಂದಾಯ ಇಲಾಖೆ ಆಗ್ರಪಂಕ್ತಿಯಲ್ಲಿದೆ ಎಂದರು.
ಕಂದಾಯ ದಿನಾಚರಣೆ ನಿಮಿತ್ತ ತಾಲೂಕು ಕಚೇರಿ ಆವರಣದಲ್ಲಿ ಸಸಿ ನೆಟ್ಟು ನೀರೆರೆಯಲಾಯಿತು. ಶಿರಸ್ತೆದಾರರಾದ ಜಿ.ಪಂಪಾಪತಿ, ರೇಖಾಮಠ್, ಆರ್‌ಐ ಎ.ಗಣೇಶ್, ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಎಚ್.ವಿ.ಮಂಜುನಾಥ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಟಿ.ಗಿರೀಶ್‌ಬಾಬು, ಗ್ರಾಲೆಗಳಾದ ಲಕ್ಷ್ಮಣನಾಯಕ, ವಿಜಯಕುಮಾರ್, ಷರೀಪ್ ಇತರರು ಇದ್ದರು.