ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವ 12ಕ್ಕೆ

KAMPLI 04
ಕಂಪ್ಲಿ ತಹಸಿಲ್ ಕಚೇರಿ ಸಭಾಂಗಣದಲ್ಲಿ ನಡೆದ ರೇಣುಕಾಚಾರ್ಯ ಜಯಂತ್ಯುತ್ಸವ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಎಸ್.ಶಿವರಾಜ, ಪ್ರಮುಖರಾದ ಎಸ್.ಡಿ.ರಮೇಶ್, ಪಿ.ಮೂಕಯ್ಯಸ್ವಾಮಿ, ಕೆ.ಎಂ.ಹೇಮಯ್ಯಸ್ವಾಮಿ, ಎಚ್.ನಾಗರಾಜ, ಎಸ್.ಎಂ.ನಾಗರಾಜ ಇತರರಿದ್ದರು.
Published on

ಕಂಪ್ಲಿ: ತಹಸಿಲ್ ಕಚೇರಿ ಸಭಾಂಗಣದಲ್ಲಿ ರೇಣುಕಾಚಾರ್ಯರ ಜಯಂತ್ಯುತ್ಸವದ ಅಂಗವಾಗಿ ಗುರುವಾರ ಪೂರ್ವಭಾವಿ ಸಭೆ ನಡೆಯಿತು.

ತಹಸೀಲ್ದಾರ್ ಎಸ್.ಶಿವರಾಜ ಮಾತನಾಡಿ, ಮಾ.12ರಂದು ರೇಣುಕಾಚಾರ್ಯರ ಜಯಂತ್ಯುತ್ಸವವನ್ನು ಸರ್ಕಾರದ ಮಾರ್ಗಸೂಚಿಯಂತೆ ಸರಳ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗುವುದು. ಎಲ್ಲ ಸಮುದಾಯಗಳ ಪ್ರಮುಖರನ್ನು ಆಹ್ವಾನಿಸಲಾಗುವುದು ಹಾಗೂ ಜಯಂತ್ಯುತ್ಸವದಲ್ಲಿ ವೀರಶೈವ ಸಮುದಾಯದವರೆಲ್ಲ ಪಾಲ್ಗೊಳ್ಳುವಂತೆ ತಿಳಿಸಿದರು.

ಗ್ರೇಡ್-2 ತಹಸೀಲ್ದಾರ್ ಎಂ.ಆರ್.ಷಣ್ಮುಖ, ಶಿರಸ್ತೇದಾರ್ ಎಸ್.ಡಿ.ರಮೇಶ್, ವೀರಶೈವ ಸಮಾಜದ ಪ್ರಮುಖರಾದ ಪಿ.ಮೂಕಯ್ಯಸ್ವಾಮಿ, ಕೆ.ಎಂ.ಹೇಮಯ್ಯಸ್ವಾಮಿ, ಎಚ್.ನಾಗರಾಜ, ಎಸ್.ಎಂ.ನಾಗರಾಜ, ಎಸ್.ಡಿ.ಬಸವರಾಜ, ಕೆ.ಎಂ.ವಾಗೀಶ ಪಂಡಿತಾರಾಧ್ಯ, ಎಲಿಗಾರ ವೆಂಕಟರೆಡ್ಡಿ, ಟಿ.ಎಚ್.ಎಂ.ರಾಜಕುಮಾರ, ಜಿ.ಚಂದ್ರಶೇಖರಗೌಡ, ಸಚ್ಚಿದಾನಂದ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net