ಪಡಿತರ ದಾಸ್ತಾನು ಪ್ರಕರಣದಲ್ಲಿ ವಾಲ್ಮೀಕಿ ಸಮುದಾಯ ಹೆಸರು ಬಳಕೆ ಸಲ್ಲ

300722 Kampli Valmiki Members Meeting
ಕಂಪ್ಲಿಯಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಮುಖಂಡರ ಸಭೆಯಲ್ಲಿ ಪ್ರಮುಖ ಎನ್.ಮಲ್ಲಿಕಾರ್ಜುನ ಮಾತನಾಡಿದರು.
Published on

ಕಂಪ್ಲಿ: ಪಡಿತರ ಅಕ್ರಮ ದಾಸ್ತಾನು ಪ್ರಕರಣದಲ್ಲಿ ಭಾಗಿಯಾದವರ ಕುರಿತು ಹೇಳಿಕೆ ನೀಡುವಾಗ ವಾಲ್ಮೀಕಿ ಸಮುದಾಯವನ್ನು ದುರ್ಬಳಕೆ ಮಾಡಿಕೊಂಡಿದ್ದು ಸರಿಯಲ್ಲ ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಮುಖಂಡ ಎನ್.ಮಲ್ಲಿಕಾರ್ಜುನ ಹೇಳಿದರು.

ಇಲ್ಲಿನ ಅತಿಥಿಗೃಹ ಆವರಣದಲ್ಲಿ ಶನಿವಾರ ಜರುಗಿದ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಮುಖಂಡರ ಸಭೆಯಲ್ಲಿ ಮಾತನಾಡಿದರು. ಪಡಿತರ ಅಕ್ರಮ ದಾಸ್ತಾನು ಪತ್ತೆ ಮಾಡಿದ ಶಾಸಕ ಜೆ.ಎನ್.ಗಣೇಶ್ ಯಾರ ಮೇಲೂ ಕೇಸ್ ಮಾಡುವಂತೆ ಒತ್ತಾಯಿಸಿಲ್ಲ. ಅಕ್ರಮ ಅಕ್ಕಿ ದಾಸ್ತಾನು ಕುರಿತು ಪೊಲೀಸರು ತನಿಖೆಗೊಳಪಡಿಸಿ ಸಂಬಂಧಿಸಿದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಪಾಲ್ಗೊಂಡವರನ್ನು ರಕ್ಷಿಸಲು ಸಮುದಾಯವನ್ನು ಬಳಕೆ ಮಾಡಿಕೊಳ್ಳಬಾರದು ಮತ್ತು ವಾಲ್ಮೀಕಿ ಸಮುದಾಯವನ್ನು ತಳುಕು ಹಾಕಬಾರದು. ಕಾನೂನುಬಾಹಿರ ಕೃತ್ಯಗಳನ್ನು ವಾಲ್ಮೀಕಿ ಸಮುದಾಯ ಬೆಂಬಲಿಸುವುದಿಲ್ಲ. ವಾಲ್ಮೀಕಿ ಸಮುದಾಯಕ್ಕೆ ಸುರೇಶ್‌ಬಾಬು, ಶ್ರೀರಾಮುಲು ಕೊಡುಗೆ ಶೂನ್ಯವಾಗಿದೆ. ಜೆ.ಎನ್.ಗಣೇಶ್ ಶೇ.7.5ಮೀಸಲು ಸೇರಿ ನಾನಾ ವಿಷಯಗಳ ಕುರಿತು ಸದನದಲ್ಲಿ ಧ್ವನಿ ಎತ್ತಿದ್ದು ಗಣೇಶ್ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ ಎಂದು ಹರಿಹಾಯ್ದರು.

ಪ್ರಮುಖರಾದ ಬಿ.ದೇವಣ್ಣ, ವೀರೇಶ್, ಜವುಕು ಬಸವರಾಜ್, ವಾಸುದೇವ ಬೆಳಗೋಡ್, ಟಿ.ವೀರೇಶ್, ದೇವಸಮುದ್ರ ದೊಡ್ಡನಾಯಕ, ವೆಂಕೋಬಾ ನಾಯಕ, ನಾಗಭೂಷಣ ಕೊಟ್ಟಾಲ್, ಉಪ್ಪಾರಳ್ಳಿ ಪರಶುರಾಮ, ಪಂಪಾಪತಿ, ದೇವಲಾಪುರ ಪೂಜಾರಿ ರಮೇಶ್, ವೆಂಕಟೇಶ್, ಸೋಮಪ್ಪ, ಎನ್.ಸಿದ್ದಪ್ಪ, ಬಿ.ಎಸ್.ನೀಲಕಂಠಪ್ಪ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net