ಜೋಡಿ ರಥೋತ್ಸವ ಅದ್ದೂರಿ

08112022 KAMPLI JODI RATHOSTAVA
Published on

ಕಂಪ್ಲಿ: ರಾಮಸಾಗರದ ತುರುಮಂದಿ ಬಸವೇಶ್ವರ ಮತ್ತು ನೀಲಮ್ಮ ಜೋಡಿ ರಥೋತ್ಸವ ಮಂಗಳವಾರ ಶ್ರದ್ಧಾಭಕ್ತಿಗಳಿಂದ ಜರುಗಿತು. ತೇರುಮನೆಯಿಂದ ಹೊರಟ ರಥಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದವು.

ರಥದ ಕಳಸಕ್ಕೆ ಸದ್ಭಕ್ತರು ಹೂ, ಪತ್ರಿ, ಉತ್ತತ್ತಿ ಎಸೆದು ತಮ್ಮ ಸದ್ಭಕ್ತಿ ಅರ್ಪಿಸಿದರು. ರಥೋತ್ಸವದಲ್ಲಿ ಹೂವಿನ ಅಡ್ಡಪಲ್ಲಕ್ಕಿ, ನಂದಿಕೋಲು, ತಾಷಾರಾಂಡೋಲು, ಮಂಗಳವಾದ್ಯಗಳು ಪಾಲ್ಗೊಂಡಿದ್ದವು. ಮಂಗಳವಾರ ಸಂಜೆ ಚಂದ್ರಗ್ರಹಣ ಜರುಗುವ ನಿಮಿತ್ತ ಮಧ್ಯಾಹ್ನ 12 ಗಂಟೆಗೆ ರಥೋತ್ಸವ ಜರುಗಿತು. ತುರುಮುಂದಿ ಬಸವೇಶ್ವರ ದೇವಸ್ಥಾನ ಮಂಡಳಿಯವರು, ಸರ್ವ ಸಮುದಾಯಗಳ ಸದ್ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net