ಶ್ರೀ ಉಮಾಮಹೇಶ್ವರ ದೇವರ ಜೋಡಿ ರಥೋತ್ಸವ ಸಂಪನ್ನ

23 KAMPLI 03
Published on

ಕಂಪ್ಲಿ: ತಾಲೂಕಿನ ರಾಮಸಾಗರದ ಆರಾಧ್ಯದೈವ ಶ್ರೀ ಉಮಾಮಹೇಶ್ವರ(ನಗರೇಶ್ವರ) ದೇವರ ಜೋಡಿ ರಥೋತ್ಸವ ಬುಧವಾರ ಸಂಜೆ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.

ದೇವಸ್ಥಾನದಿಂದ ಪಾದಗಟ್ಟೆತನಕ ರಥೋತ್ಸವದೊಂದಿಗೆ ಹೂವಿನಪಲ್ಲಕ್ಕಿಯ ಮೆರವಣಿಗೆಯೂ ಜರುಗಿತು. ರಥದ ಕಳಸಗಳಿಗೆ ಸದ್ಭಕ್ತರು ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.

ರಥದ ಮುಂಭಾಗದಲ್ಲಿ ಡೊಳ್ಳುಕುಣಿತ, ನಂದಿಕೋಲು, ತಾಷಾರಾಂಡೋಲು ಜನಪದಕಲಾವಿದರ ತಂಡಗಳು ಪಾಲ್ಗೊಂಡು ಶೋಭೆ ಹೆಚ್ಚಿಸಿದವು. ಶ್ರೀ ಉಮಾಮಹೇಶ್ವರ ಸೇವಾ ಸಮಿತಿ ಅಧ್ಯಕ್ಷ ಎಚ್.ಟಿ.ರಾಜಶೇಖರಗೌಡ, ಪದಾಧಿಕಾರಿಗಳಾದ ಬಿ.ಮಂಜುನಾಥ, ರಾಗಿ ಪಂಪಯ್ಯ, ಎ.ಮುರುಳೀಧರ, ಕೆ.ಪರಶುರಾಮ, ಐಗಾರ್ ಹುಲುಗಪ್ಪ, ಬಿ.ಹುಲಿಗೆಮ್ಮ, ಜಿ.ಜಯಮ್ಮ, ಎಚ್.ಪಿ.ಬದರಿನಾಯಣ, ಹುಲಿಕುಂಠಪ್ಪ, ಅಂಗಡಿ ಕಿಟ್ಟಿ, ಗಿರಿಧರ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net