ಕಂಪ್ಲಿ ರೈನ್‌ಬೋ ಕಾಲೇಜಿನಲ್ಲಿ ಉಚಿತ ಪ್ರವೇಶ

ಕಂಪ್ಲಿ ರೈನ್‌ಬೋ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಕೆ.ಸಿ.ಬಿ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಕೆ.ಎಸ್.ಚಾಂದ್ ಬಾಷಾ ಮಾತನಾಡಿದರು. ಪ್ರಮುಖರಾದ ಶ್ರೀನಿವಾಸ್, ಕೆ.ಎಸ್.ಮೆಹಬೂಬ್ ಬಾಷಾ, ಶಂಷೇರ್, ಮೇಘಾ ಇದ್ದರು.
ಕಂಪ್ಲಿ ರೈನ್‌ಬೋ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಕೆ.ಸಿ.ಬಿ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಕೆ.ಎಸ್.ಚಾಂದ್ ಬಾಷಾ ಮಾತನಾಡಿದರು. ಪ್ರಮುಖರಾದ ಶ್ರೀನಿವಾಸ್, ಕೆ.ಎಸ್.ಮೆಹಬೂಬ್ ಬಾಷಾ, ಶಂಷೇರ್, ಮೇಘಾ ಇದ್ದರು.
Published on

ಕಂಪ್ಲಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸುವ ಬಳ್ಳಾರಿ ಜಿಲ್ಲೆಯ ಐದು ತಾಲೂಕಿನ ವಿದ್ಯಾರ್ಥಿಗಳಿಗೆ ಪಟ್ಟಣದ ರೈನ್‌ಬೋ ಪಿಯು ಕಾಲೇಜಿನಲ್ಲಿ ಪ್ರಥಮ ವರ್ಷ ಉಚಿತ ಪ್ರವೇಶ ನೀಡಲಾಗುವುದು ಎಂದು ಕೆ.ಸಿ.ಬಿ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಕೆ.ಎಸ್.ಚಾಂದ್ ಬಾಷಾ ಹೇಳಿದರು.

ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಆಡಳಿತ ಮಂಡಳಿ ಸಭೆಯಲ್ಲಿ ಶುಕ್ರವಾರ ಮಾತನಾಡಿದರು. 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಐದು ತಾಲೂಕಿನಲ್ಲಿ ಕನ್ನಡ ಹಾಗೂ ಆಂಗ್ಲ ಮಾಧ್ಯಮ, ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಪಠ್ಯಕ್ರಮದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ತಾಲೂಕಿಗೆ ನಾಲ್ಕು ವಿದ್ಯಾರ್ಥಿಗಳಂತೆ ಜಿಲ್ಲೆಯ 20ವಿದ್ಯಾರ್ಥಿಗಳಿಗೆ ರೈನ್‌ಬೋ ಕಾಲೇಜಿನಲ್ಲಿ 2025-26ನೇ ಸಾಲಿನ ಪಿಯುಸಿ ಪ್ರಥಮ ವರ್ಷಕ್ಕೆ ಉಚಿತ ಶಿಕ್ಷಣದೊಂದಿಗೆ ನೀಟ್, ಕೆಸಿಇಟಿ, ಜೆಇಇ ಪರೀಕ್ಷೆಗೆ ಉಚಿತ ತರಬೇತಿ ನೀಡಲಾಗುವುದು. ಐದು ತಾಲೂಕಿನ ಇಪ್ಪತ್ತು ವಿದ್ಯಾರ್ಥಿಗಳಿಗೆ ಕೆಸಿಬಿ ಎಜುಕೇಷನಲ್ ಟ್ರಸ್ಟ್‌ನಿಂದ ಶಿಕ್ಷಣ ವೆಚ್ಚ ಭರಿಸಲಿದೆ. ಹೆಚ್ಚಿನ ವಿವರಗಳಿಗೆ ಮೊ.ಸಂ. 9880490477, 9980572088 ಸಂಪರ್ಕಿಸುವಂತೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net