ಸಣಾಪುರ-ಇಟಗಿ ಗ್ರಾಮಗಳ ನಡುವಿನ ನಾರಿಹಳ್ಳ ಸೇತುವೆ ಮುಳುಗಡೆ

06092022 Kampli rain
Published on

ಕಂಪ್ಲಿ: ತಾಲೂಕಿನಾದ್ಯಂತ ಸೋಮವಾರ ರಾತ್ರಿ 24.6ಮಿ.ಮೀ. ಮಳೆ ಸುರಿದಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, 18 ಕಚ್ಚಾ ಮನೆಗಳು ಕುಸಿದರೆ, ಬೆಳೆಗಳು ಜಲಾವೃತಗೊಂಡಿದೆ.

ಕಂಪ್ಲಿ, ದೇವಲಾಪುರದಲ್ಲಿ ತಲಾ 1, ಎಮ್ಮಿಗನೂರಿನಲ್ಲಿ 9, ಉಪ್ಪಾರಳ್ಳಿ, ಮೆಟ್ರಿಗಳಲ್ಲಿ ತಲಾ 2, ಗೋನಾಳ್‌ದಲ್ಲಿ 3 ಕಚ್ಚಾಮನೆಗಳು ಭಾಗಶಃ ಕುಸಿದಿವೆ. ಬಳ್ಳಾಪುರ, ಇಟಗಿ, ಸಣಾಪುರ, ಸುಗ್ಗೆನಹಳ್ಳಿಯ ಶಾರದಾನಗರ, ಚಿನ್ನಾಪುರ, ಜಾಯಿಗನೂರು ಗ್ರಾಮಗಳ ಹಳ್ಳಗಳ ಸೇತುವೆಗಳು ಮುಳುಗಿ ಸಂಚಾರಕ್ಕೆ ಅಡಚಣೆಯಾಗಿದೆ.

ನೆಲ್ಲೂಡಿ, ದೇವಲಾಪುರ, ಸೋಮಲಾಪುರ, ಜವುಕು, ಗೋನಾಳ್, ಕಣ್ವಿತಿಮ್ಮಲಾಪುರ, ನಂ.2ಮುದ್ದಾಪುರ ಮತ್ತಿತರ ಗ್ರಾಮಗಳ ಹಳ್ಳದ ತೀರದ 20 ಹೆಕ್ಟೇರ್‌ನ ಭತ್ತ ಮತ್ತಿತರ ಬೆಳೆಗಳು ಜಲಾವೃತಗೊಂಡಿವೆ. ಹಗಲೆಲ್ಲ ಬಿಸಿಲು, ಸೆಕೆ ಇತ್ತು. ರಾತ್ರಿ ಮಳೆ ಸುರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net