ಮಳೆಗೆ ನಾಲ್ಕು ಮನೆ ಕುಸಿತ, ಬೆಳೆ ಜಲಾವೃತ

03082022 kampli birdze
Published on


ಕಂಪ್ಲಿ: ಪಟ್ಟಣ ಸೇರಿ ತಾಲೂಕಾದ್ಯಂತ ಮಂಗಳವಾರ 2.4ಮಿ.ಮೀ. ಮಳೆ ಬಿದ್ದಿದೆ. ಮಳೆಗೆ ಮನೆಗಳು ಭಾಗಶಃ ಕುಸಿದಿವೆ. ಯಾವುದೇ ಜೀವಹಾನಿಯಾಗಿಲ್ಲ. ರಭಸದ ಮಳೆಗೆ ಎಮ್ಮಿಗನೂರು ಗ್ರಾಮದಲ್ಲಿ 2, ಕಣ್ಣಿ ತಿಮ್ಮಲಾಪುರ ಗ್ರಾಮದಲ್ಲಿ 2 ಸೇರಿ ಒಟ್ಟು ನಾಲ್ಕು ಕಚ್ಚಾ ಮನೆಗಳು ಭಾಗಶಃ ಕುಸಿದಿವೆ. ಕಣ್ವಿ ತಿಮ್ಮಲಾಪುರ ಗ್ರಾಮದಲ್ಲಿ 1.65ಎಕರೆ ಬಾಳೆ, 7.50ಎಕರೆ ಮಕ್ಕೆಜೋಳ ಬೆಳೆ ಜಲಾವೃತಗೊಂಡಿದೆ ಎಂದು ತಹಸೀಲ್ದಾರ್ ಗೌಸಿಯಾಬೇಗಂ ತಿಳಿಸಿದ್ದಾರೆ.

ಜಲಾಶಯದಿಂದ ಸುಮಾರು 90ಸಾವಿರ ಕ್ಯೂಸೆಕ್‌ನಷ್ಟು ತುಂಗಭದ್ರಾ ನದಿಗೆ ನೀರು ಹರಿದು ಬರುತ್ತಿದ್ದು, ಸೇತುವೆ ಮುಳುಗಳು ಒಂದೆರೆಡು ಅಡಿಗಳಷ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net