ಪುರಾಣ ಶ್ರವಣದಿಂದ ಹೆಚ್ಚಲಿದ ಆತ್ಮಸ್ಥೈರ್ಯ

Kampli Purana
ಕಂಪ್ಲಿ ಸಾಂಗತ್ರಯ ಪಾಠಶಾಲೆಯಲ್ಲಿ ಪುರಾಣ ನಿಮಿತ್ತ ಬುಕ್ಕಸಾಗರದ ವಿಶ್ವಾರಾಧ್ಯ ಶಿವಾಚಾರ್ಯರು ಷಟ್‌ಸ್ಥಲ ಧ್ವಜಾರೋಹಣ ಮಾಡಿದರು. ಪ್ರಮುಖರಾದ ಇಟಗಿ ಬಸವರಾಜ ಗೌಡ, ಕೆ.ಎಂ.ಹೇಮಯ್ಯಸ್ವಾಮಿ, ಅರವಿ ಬಸವನಗೌಡ, ಪಿ.ಮೂಕಯ್ಯಸ್ವಾಮಿ, ಎಸ್.ಎಸ್.ಎಂ.ಚನ್ನಯ್ಯಸ್ವಾಮಿ ಇತರರಿದ್ದರು.
Published on

ಕಂಪ್ಲಿ: ಪುರಾಣ ಪ್ರವಚನಗಳು ಬದುಕನ್ನು ಹಸನಗೊಳಿಸುತ್ತವೆ ಎಂದು ಬುಕ್ಕಸಾಗರದ ಕರಿಸಿದ್ಧೇಶ್ವರ ಸಂಸ್ಥಾನಮಠದ ವಿಶ್ವ್ವಾರಾಧ್ಯ ಶಿವಾಚಾರ್ಯರು ಹೇಳಿದರು.

ಶ್ರಾವಣ ಪ್ರಯುಕ್ತ ಇಲ್ಲಿನ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಎಮ್ಮಿಗನೂರಿನ ಶ್ರೀ ಜಡಿಸಿದ್ಧ ಶಿವಯೋಗಿಗಳ ಲೀಲಾಮೃತ ಪುರಾಣ ನಿಮಿತ್ತ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿ ಸೋಮವಾರ ಮಾತನಾಡಿದರು.

ಪುರಾಣ ಕೇಳುವುದರಿಂದ ಆತ್ಮಸ್ಥೈರ್ಯದಿಂದ ಜೀವನ ಸಾಗಿಸುವ ಧೈರ್ಯ ದೊರಕುತ್ತದೆ. ಜನರಲ್ಲಿ ಸಂಸ್ಕಾರ, ಸಂಸ್ಕೃತಿ, ಮಾನವೀಯ ಮೌಲ್ಯಗಳು, ನೈತಿಕ ಮತ್ತು ಪ್ರಾಮಾಣಿಕತೆಗೆ ಪ್ರೇರಣೆಯಾಗುತ್ತದೆ ಎಂದರು.

ಪಾಠಶಾಲೆ ಅಧ್ಯಕ್ಷ ಇಟಗಿ ಬಸವರಾಜಗೌಡ ಮಾತನಾಡಿ, ಶ್ರಾವಣಮಾಸ ಪೂರ್ತಿ ನಿತ್ಯ ಸಂಜೆ 6ಗಂಟೆಯಿಂದ ಪುರಾಣ ಆರಂಭಗೊಳ್ಳುತ್ತದೆ. ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ ಜನರು ಪಾಲ್ಗೊಳ್ಳಬೇಕು ಎಂದರು.

ಪಾಠಶಾಲೆ ಪದಾಧಿಕಾರಿಗಳಾದ ಅಲಬನೂರು ಬಸವರಾಜ, ಜಿ.ಎಚ್.ಶಶಿಧರಗೌಡ, ಗಂಡಿ ಗಣೇಶ, ಟಿ.ಸುರೇಶಗೌಡ, ಅರವಿ ಅಮರೇಶಗೌಡ, ಡಾ.ಜಗನ್ನಾಥ ಹಿರೇಮಠ, ಯುಗಾದಿ ಬಸವರಾಜ, ಗೌಳೇರು ಶೇಖರಪ್ಪ, ಅಳ್ಳಿ ನಾಗರಾಜ, ಕೋರಿಶೆಟ್ರು ಸಣ್ಣ ಶಿವುಶರಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net