ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸಿ

131022 Kampli health Inforamation
ಕಂಪ್ಲಿ ಪುರಸಭೆಯಲ್ಲಿ ಎಲ್‌ಇಡಿ ಮೂಲಕ ಆರೋಗ್ಯ ಸೇವೆ, ಸೌಲಭ್ಯಗಳ ಮಾಹಿತಿ ಪ್ರದರ್ಶನ ನಡೆಯಿತು.
Published on

ಕಂಪ್ಲಿ: ಅಂಗಾಂಗ ದಾನ ಮಾಡುವಲ್ಲಿ ಸಾರ್ವಜನಿಕರು ಹೆಸರು ನೋಂದಾಯಿಸಲು ಜಾಗೃತಿ ತೋರಬೇಕು ಎಂದು ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಶೋಭಾ ಹೇಳಿದರು.

ಇಲ್ಲಿನ ಪುರಸಭೆ ಆವರಣದಲ್ಲಿ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಯಕ್ರಮದಡಿ ಎಲ್‌ಇ ಮೂಲಕ ಆರೋಗ್ಯ ಸೇವೆ, ಸೌಲಭ್ಯಗಳ ಮಾಹಿತಿ ಪ್ರದರ್ಶನಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು. ಅಂಗಾಂಗ ದಾನದಿಂದ ಅಗತ್ಯವುಳ್ಳವರಿಗೆ ಸಹಾಯವಾಗುತ್ತದೆ. ಅಂಗಾಂಗ ದಾನಕ್ಕಾಗಿ ಆನ್‌ಲೈನ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು ಎಂದರು.

ಪುರಸಭೆ ಸದಸ್ಯ ಟಿ.ವಿ.ಸುದರ್ಶನರೆಡ್ಡಿ ಎಲ್‌ಇಡಿ ಮೂಲಕ ಆರೋಗ್ಯ ಸೇವೆ, ಸೌಲಭ್ಯಗಳ ಮಾಹಿತಿ ಪ್ರದರ್ಶನಕ್ಕೆ ಚಾಲನೆ ನೀಡಿ, ಸಾರ್ವಜನಿಕರಿಗಾಗಿ ನಾನಾ ಆರೋಗ್ಯ ಸೇವೆ ಮತ್ತು ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿದ್ದು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಚನ್ನಬಸವರಾಜ್, ಪುರಸಭೆ ಸಿಬ್ಬಂದಿ ಟಿ.ಸುಧಾಕರ, ಗೌಳೇರು ನಾಗರಾಜ್, ರೇಣುಕಾ, ರೋಜಾ ಲಕ್ಷ್ಮೀ ರವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net