ಸಸಿ ನೆಟ್ಟು ಪೋಷಿಸುವ ಸಂಕಲ್ಪ ಮಾಡಿ

Kampli Tree
ಕಂಪ್ಲಿಯ ಬಸವೇಶ್ವರ ನಗರದಲ್ಲಿ ರಾಯಲ್ ಬಾಯ್ಸ ಗ್ರೂಪ್ಸ್ ಯುವಕರು ಸಸಿ ನೆಟ್ಟು ನೀರುಣಿಸಿದರು. ಪ್ರಮುಖರಾದ ಶರಣಬಸವ ಹಿರೇಮಠ, ಪ್ರಮೋದ್ ಬಟಾರಿ, ದೊಡ್ಡಬಸವ, ಸಾಗರ್, ಕೆ.ಹನುಮಂತಪ್ಪ ಇತರರಿದ್ದರು.
Published on

ಕಂಪ್ಲಿ: ಪರಿಸರ ಸಂರಕ್ಷಣೆ ಜಾಗೃತಿಗಾಗಿ ಸಸಿ ನೆಟ್ಟು ನೀರುಣಿಸಿ ವೃಕ್ಷಗಳನ್ನಾಗಿ ಬೆಳೆಸುವ ಸಂಕಲ್ಪ ಹೊಂದಿದ್ದೇವೆ ಎಂದು ಇಲ್ಲಿನ ಬಸವೇಶ್ವರ ನಗರದ ರಾಯಲ್ ಬಾಯ್ಸ ಗ್ರೂಪ್ ಅಧ್ಯಕ್ಷ ಶರಣಬಸವ ಹಿರೇಮಠ ಹೇಳಿದರು.

ಪಟ್ಟಣದ ಬಸವೇಶ್ವರ ನಗರದಲ್ಲಿ ಗಣೇಶ ಚತುರ್ಥಿ ನಿಮಿತ್ತ ಭಾನುವಾರ ಬಸವೇಶ್ವರ ನಗರದಲ್ಲಿ 150ಸಸಿಗಳನ್ನು ನೆಟ್ಟು ಮಾತನಾಡಿದರು.

ಪರಿಸರ ಜಾಗೃತಿ ನಿತ್ಯ ಜೀವನದ ಅವಿಭಾಜ್ಯ ಅಂಗವಾಗಬೇಕು. ಸಸಿಗಳನ್ನು ನೆಟ್ಟು ಕೈಬಿಡದೆ ನೀರುಣಿಸಿ ಮರಗಳನ್ನಾಗಿ ಬೆಳೆಸುವಲ್ಲಿ ರಾಯಲ್ ಬಾಯ್ಸ ಗ್ರೂಪ್ ಯುವಕರು ಮುಂದಾಗಲಿದ್ದಾರೆ. ಮನೆಗಳ ಮುಂದೆ ಜಾಗವಿದ್ದಲ್ಲಿ ಸಸಿಗಳನ್ನು ನೆಟ್ಟು ಪೋಷಣೆ ಮಾಡಬೇಕು ಎಂದು ತಿಳಿಸಿದರು.

ರಾಯಲ್ ಬಾಯ್ಸ ಗ್ರೂಪ್ಸ್ ಪದಾಧಿಕಾರಿಗಳಾದ ಪ್ರಮೋದ್ ಬಟಾರಿ, ದೊಡ್ಡಬಸವ, ಸಾಗರ್, ಅಲ್ತಾಫ್, ಪ್ರಜ್ವಲ್, ಮನೋಜ್, ಚಂದ್ರು, ಸಿದ್ದು, ಪ್ರಶಾಂತ, ಪ್ರವೀಣ್, ಇಮ್ಯಾನುವೇಲ್, ವಿಜಯ, ಮಹಾದೇವ, ಶ್ರೀಕಾಂತ, ಪ್ರಹ್ಲಾದ್, ಕಿಶೋರ್, ಅರವಿಂದ್, ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಹನುಮಂತಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net