ಪಾದಚಾರಿ ರಸ್ತೆ ಅತಿಕ್ರಮಣ ತೆರವು

Kampli Demolish
ಕಂಪ್ಲಿಯ ಸಣಾಪುರ ರಸ್ತೆಯ ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿದ್ದ ಗೂಡಂಗಡಿಯನ್ನು ತೆರವುಗೊಳಿಸುತ್ತಿರುವ ಪುರಸಭೆ ಸಿಬ್ಬಂದಿ.
Published on

ಕಂಪ್ಲಿ: ಪಟ್ಟಣದ ಸಣಾಪುರ ರಸ್ತೆಯ ಪಾದಚಾರಿ ಮಾರ್ಗ ಅತಿಕ್ರಮಿಸಿಕೊಂಡಿದ್ದ ತಳ್ಳುವ ಬಂಡಿ, ಗೂಡಂಗಡಿ, ಶೆಡ್‌ಗಳನ್ನು ಪುರಸಭೆ ಸಿಬ್ಬಂದಿ ಶುಕ್ರವಾರ ತೆರವುಗೊಳಿಸಿದರು.

ಈ ಸಂದರ್ಭದಲ್ಲಿ ವ್ಯಾಪಾರಿಗಳು ಏಕಾಏಕಿ ತೆರವುಗೊಳಿಸಬಾರದು. ಸಮಯಾವಾಕಾಶ ನೀಡಿದಲ್ಲಿ ಜಾಗ ಖಾಲಿ ಮಾಡಲಾಗುವುದು ಎಂದು ಕೋರಿದರು. ಮುಖ್ಯಾಧಿಕಾರಿ ಕೆ.ದುರುಗಣ್ಣ ಮಾತನಾಡಿ, ಕಳೆದ ಒಂದು ವಾರ ಕಾಲಾವಕಾಶ ನೀಡಲಾಗಿತ್ತು.

ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಅನಿವಾರ್ಯವಾಗಿ ತೆರವುಗೊಳಿಸಬೇಕಿದೆ ಎಂದರು. ಅಲ್ಲದೆ, ಸರ್ಕಾರಿ ಆಸ್ಪತ್ರೆ, ಪಿಯು ಕಾಲೇಜು ಮುಂಭಾಗದ ಪಾದಚಾರಿ ರಸ್ತೆ ಅತಿಕ್ರಮಿಸಿದವರಿಗೂ ಕೂಡಲೇ ತೆರವುಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಆರೋಗ್ಯ ನಿರೀಕ್ಷಕ ಪ್ರಕಾಶ್‌ಬಾಬು, ಮೇಸ್ತ್ರಿಗಳಾದ ವೆಂಕಟೇಶ್, ಒಬಳೇಶ್, ಪೌರ ಕಾರ್ಮಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net