ರೋಗಗಳಿಗೆ ರಾಮಬಾಣ ಸೂರ್ಯ ನಮಸ್ಕಾರ

Kampli Patanjali yoga class
ಕಂಪ್ಲಿಯ ಪತಂಜಲಿ ಯೋಗ ಸಮಿತಿ ಹಮ್ಮಿಕೊಂಡಿದ್ದ ರಥಸಪ್ತಮಿ ಕಾರ್ಯಕ್ರಮದಲ್ಲಿ ಯೋಗಾಭ್ಯಾಸ ಮಾಡಲಾಯಿತು. ಯೋಗ ಸಾಧಕರಾದ ಡಿ.ಮೌನೇಶ್, ಷಣ್ಮುಖಪ್ಪ ಚಿತ್ರಗಾರ್, ಕಲ್ಗುಡಿ ರತ್ನಮ್ಮ ಇದ್ದರು.
Published on

ಕಂಪ್ಲಿ: ಆರೋಗ್ಯ ಗಳಿಸಲು ಸಾಧ್ಯ ಎಂದು ಪತಂಜಲಿ ಯೋಗ ಕೇಂದ್ರದ ತಾಲೂಕು ಪ್ರಭಾರಿ ಡಿ.ಮೌನೇಶ್ ಹೇಳಿದರು.

ಪಟ್ಟಣದ ಓದ್ಸೋ ಜಡೆಮ್ಮ ಗುರುಸಿದ್ಧಯ್ಯ ಪ್ರೌಢಶಾಲೆ ಆವರಣದಲ್ಲಿ ರಥಸಪ್ತಮಿ ನಿಮಿತ್ತ ಮಂಗಳವಾರ ಪತಂಜಲಿ ಯೋಗ ಸಮಿತಿ ಹಮ್ಮಿಕೊಂಡಿದ್ದ ಸೂರ್ಯ ನಮಸ್ಕಾರ ಮಹತ್ವ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಿತ್ಯ ಸೂರ್ಯ ನಮಸ್ಕಾರ ಮಾಡುವುದರಿಂದ ಮಾನಸಿಕ, ಶಾರೀರಿಕ ಆರೋಗ್ಯ ಲಭಿಸುತ್ತದೆ. ಒತ್ತಡ, ವಿಷಯುಕ್ತ ಆಹಾರ ಸೇವನೆ ಹಾಗೂ ಪಾಶ್ಚಾತ್ಯ ಜೀವನಶೈಲಿ ಅನುಕರಣೆಯಿಂದಾಗಿ ಎದುರಾಗುತ್ತಿರುವ ನಾನಾ ರೋಗಗಳಿಗೆ ಸೂರ್ಯ ನಮಸ್ಕಾರ ರಾಮಬಾಣವಾಗಿದೆ ಎಂದರು. ರಥಸಪ್ತಮಿ ನಿಮಿತ್ತ ಯೋಗ ಸಾಧಕರು 108 ಸೂರ್ಯ ನಮಸ್ಕಾರದೊಡನೆ ಯೋಗ, ಧ್ಯಾನ, ಪ್ರಾಣಾಯಾಮ ಮಾಡಿದರು.

ಸಮಿತಿ ಕಾರ್ಯದರ್ಶಿ ಷಣ್ಮುಖಪ್ಪ ಚಿತ್ರಗಾರ್, ಮಹಿಳಾ ಪ್ರಭಾರಿ ಕಲ್ಗುಡಿ ರತ್ನಮ್ಮ, ಯೋಗ ಸಾಧಕರಾದ ತಿಪ್ಪೇಸ್ವಾಮಿ ಕಾರೇಮಂಗಿ, ಡಿ.ವಿ.ಸುಬ್ಬಾರಾವ್, ಸುಭಾಶ್ಚಂದ್ರಬೋಸ್, ವಿ.ರಾಮಲಿಂಗಯ್ಯ, ಇಟಗಿ ವಿರುಪಾಕ್ಷಿ, ಕಿಶೋರ್, ಭೀಮನಗೌಡ, ಸತ್ಯನಾರಾಯಣ, ಕೆ.ನಾಗಪ್ಪ, ಹನುಮಂತಪ್ಪ, ಶಿವಪ್ಪ, ಕಲ್ಗುಡಿ ನಾಗರತ್ನಮ್ಮ, ಭವಾನಿ, ಮಮತಾ, ವಿಜಯಲಕ್ಷ್ಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net