ಹುತ್ತಗಳಿಗೆ ನಮಿಸಿದ ಜನರು

Kampli Nagarapanchami festival
ಕಂಪ್ಲಿ ಪಂಪಾಪತಿ ದೇವಸ್ಥಾನ ಬಳಿ ನಾಗಮೂರ್ತಿಗಳಿಗೆ ಭಕ್ತರು ಹಾಲೆರೆದರು.
Published on

ಕಂಪ್ಲಿ: ನಾಗಚತುರ್ಥಿ ನಿಮಿತ್ತ ತಾಲೂಕಿನಾದ್ಯಂತ ಜನರು ನಾಗರ ಮೂರ್ತಿ ಹಾಗೂ ಹೊಲ-ಗದ್ದೆಗಳಲ್ಲಿನ ಹುತ್ತಗಳನ್ನು ಪೂಜಿಸಿ ಸೋಮವಾರ ಹಾಲು ಎರೆದರು. ಮಹಿಳೆಯರು, ಮಕ್ಕಳು ಹೊಸ ಉಡುಗೆ ಧರಿಸಿ ಸಂಭ್ರಮಿಸಿದರು.

ಪಟ್ಟಣದ ಕೋಟೆ ಪ್ರದೇಶ ಬಳಿ ತುಂಗಭದ್ರಾ ನದಿ ತಟದಲ್ಲಿರುವ ಐತಿಹಾಸಿಕ ಪಂಪಾಪತಿ ದೇವಸ್ಥಾನ ಎದುರಿನ ನಾಗದೇವತೆ ಮೂರ್ತಿಗಳ ಸಮುಚ್ಚಯ ಕಟ್ಟೆ, ಶ್ರೀಪೇಟೆ ಬಸವೇಶ್ವರ, ರಾಮಲಿಂಗ ದೇವಸ್ಥಾನ, ಸತ್ಯನಾರಾಯಣಪೇಟೆಯ ವೆಂಕಟರಮಣ ದೇವಸ್ಥಾನದಲ್ಲಿನ ಸುಬ್ರಹ್ಮಣ್ಯ ನಾಗಪ್ರತಿಮೆ, ಎಪಿಎಂಸಿ ಆವರಣ ಬಳಿಯ ಈರಣ್ಣ ಗುಡಿ ಸೇರಿದಂತೆ ಬಾವಿ, ಅರಳಿ, ಆಲದವೃಕ್ಷಗಳ ಬುಡದಲ್ಲಿ ಪ್ರತಿಷ್ಠಾಪಿಸಿದ ನಾಗ ಮೂರ್ತಿಗಳನ್ನು ಪೂಜಿಸಿ ಹಾಲೆರೆದು ಭಕ್ತಿ ಸಮರ್ಪಿಸಿದರು.

ಮಣ್ಣಿನಿಂದ ತಯಾರಿಸಿದ ನಾಗಪ್ಪ, ಚಿತ್ರಗಾರರು ತಯಾರಿಸಿದ ಬಣ್ಣದ ಮಣ್ಣಿನ ನಾಗ ಪ್ರತಿಮೆಗಳನ್ನು ಕೊಂಡು ಜನರು ಪೂಜಿಸಿದರು. ನಾಗ ಪ್ರತಿಮೆಗಳಿಗೆ ಹತ್ತಿಯ ಅಂಗನೂಲು ಹಾಕಿ, ಹಾಲೆರೆದು ತಂಬಿಟ್ಟುನೊಂದಿಗೆ ನಾನಾ ತರಹದ ಉಂಡೆಗಳನ್ನುನೈವೇದ್ಯವಾಗಿ ಅರ್ಪಿಸಿದರು. ಮನೆ ಅಂಗಳದಲ್ಲಿ ನಾಗ ಚತುರ್ಥಿ ನಿಮಿತ್ತ ನಾಗಬಂಧ, ನಾನಾ ನಾಗಗಳ ರಂಗೋಲಿ ಚಿತ್ರಿಸಿ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net