

ಕಂಪ್ಲಿ: ತುಂಗಭದ್ರಾ ನದಿ ಹರಿವು ತಗ್ಗಿದ್ದರಿಂದ ಸೇತುವೆ ಮೇಲೆ ಪಾದಚಾರಿಗಳ ಓಡಾಟಕ್ಕೆ ಶನಿವಾರ ಅನುಮತಿ ನೀಡಲಾಗಿದೆ. ಇದರಿಂದ ಗಂಗಾವತಿಯತ್ತ ತೆರಳುವ ಪ್ರಯಾಣಿಕರು, ವಿದ್ಯಾರ್ಥಿಗಳು, ಕೃಷಿಕರಿಗೆ ಅನುಕೂಲವಾಗಿದೆ.
ನದಿಗೆ ಹರಿದು ಬರುವ ನೀರಿನ ಪ್ರಮಾಣ ಕಡಿಮೆಯಾದ ಕಾರಣ ಆ.15ರಿಂದ ಸೇತುವೆ ರಕ್ಷಣಾ ಕಂಬಿಗಳ ದುರಸ್ತಿ ಕಾರ್ಯ ಮರು ಆರಂಭಿಸಿದೆ. ಇದೀಗ ಶನಿವಾರದಿಂದ ಪಾದಚಾರಿಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ.
ರಕ್ಷಣಾ ಕಂಬಿಗಳ ದುರಸ್ತಿ ಕಾರ್ಯ ಪೂರ್ಣಗೊಳಿಸಿ ಆ.19ರಿಂದ ದ್ವಿಚಕ್ರವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಗಂಗಾವತಿ ಪಿಡಬ್ಲುೃಡಿ ಎಇಇ ಜೆ.ವಿಶ್ವನಾಥ ತಿಳಿಸಿದ್ದಾರೆ.