

ಕಂಪ್ಲಿ: ತಾಲೂಕಿನ ನಂ.10ಮುದ್ದಾಪುರ ಗ್ರಾಮದಲ್ಲಿ ದೇವಾಂಗ ಸಮುದಾಯದ ಕುಲಗುರು ಶ್ರೀದೇವಲ ಮಹರ್ಷಿ ಜಯಂತ್ಯುತ್ಸವ ಬುಧವಾರ ಆಚರಿಸಲಾಯಿತು.
ವಿನಾಯಕ, ಶ್ರೀರಾಮಲಿಂಗ ಚೌಡೇಶ್ವರಿ ದೇವರಿಗೆ ಅಭಿಷೇಕ ಮಾಡಲಾಯಿತು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಲ ಮಹರ್ಷಿಗಳ ಭಾವಚಿತ್ರ ಮೆರವಣಿಗೆ ನಡೆಯಿತು. ವಸ್ತ್ರದಾನ, ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆದವು.
ಸಮಾಜದ ಗ್ರಾಮ ಘಟಕದ ಅಧ್ಯಕ್ಷ ಕೊಂಡಮಿ ಕುಮಾರಸ್ವಾಮಿ ಮಾತನಾಡಿ, ದೇವಾಂಗ ಸಮುದಾಯದ ಭವನಕ್ಕೆ ಹತ್ತು ಲಕ್ಷ ರೂಪಾಯಿಗಳ ಅನುದಾನ ಒದಗಿಸುವಂತೆ ಶಾಸಕರನ್ನು ಒತ್ತಾಯಿಸಿದರು.
ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಸಮುದಾಯ ಭವನ ಪೂರ್ಣಗೊಳಿಸಲು ಅಗತ್ಯವಿರುವ ಅನುದಾನ ಒದಗಿಸಲಾಗುವುದೆಂದು ಭರವಸೆ ನೀಡಿದರು.
ಅರ್ಚಕ ಮಂಜುನಾಥ. ಪ್ರಮುಖರಾದ ಶ್ರೀನಿವಾಸಪ್ಪಬುದ್ದಿ, ವಿಠೋಬಣ್ಣ ವಠಾರ, ಕನಪ ಬಸವರಾಜ, ಎರ‌್ರಿಸ್ವಾಮಿ, ಮಂಜುನಾಥ್ ಗಂಜಿ, ಬಿ.ಮರೆಪ್ಪ, ಜಿ.ಗಂಗಾಧರ, ರಾಮಣ್ಣ, ಶಿವಲಿಂಗಪ್ಪ, ನಾಗರಾಜ್, ಪ್ರಭಾಕರ್, ರಾಮಚಂದ್ರಪ್ಪ, ವೀರಭದ್ರಪ್ಪ, ಗ್ರಾಮದ ಪ್ರಮುಖ ಕಟ್ಟೆ ದುರುಗಪ್ಪ ಸೇರಿ ಸರ್ವ ಸಮುದಾಯಗಳ ಸದ್ಭಕ್ತರು ಪಾಲ್ಗೊಂಡಿದ್ದರು.
ನಿಗಮ ಸ್ಥಾಪಿಸಿ: ಪಟ್ಟಣದ ಶ್ರೀಚೌಡೇಶ್ವರಿ ದೇವಸ್ಥಾನದಲ್ಲಿ ದೇವಲ ಮಹರ್ಷಿ ಜಯಂತ್ಯುತ್ಸವ ಆಚರಿಸಲಾಯಿತು. ಸಮಾಜದ ತಾಲೂಕು ಅಧ್ಯಕ್ಷ ಸಪ್ಪರದ ರಾಘವೇಂದ್ರ ಮಾತನಾಡಿ, ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆಯಾಗಬೇಕು, ಸರ್ಕಾರವೇ ದೇವಾಂಗ ಜಯಂತ್ಯುತ್ಸವ ಆಚರಿಸಬೇಕು ಎಂದು ಒತ್ತಾಯಿಸಿದರು. ದೇವಲ ಮಹರ್ಷಿ ಭಾವಚಿತ್ರಕ್ಕೆ ವಿಶೇಷ ಪೂಜೆ, ಚೌಡೇಶ್ವರಿ ಅಮ್ಮನವರಿಗೆ ರುದ್ರಾಭಿಷೇಕ, ನವಗ್ರಹಗಳಿಗೆ ಅಭಿಷೇಕ, ಸಪ್ತರ್ಷಿ ಪ್ರತಿಮೆಗಳ ಪ್ರತಿಷ್ಠಾಪನಾಪೂರ್ವ ಪೂಜಾ, ವಸ್ತ್ರದಾನ ಕಾರ್ಯಕ್ರಮಗಳು ನಡೆದವು.
ಪ್ರಮುಖರಾದ ಸುಮಿತ್ರಮ್ಮ ದೇವಾಂಗಮಠ, ಮಂಜುನಾಥ ದೇವಾಂಗಮಠ, ಅರ್ಚಕ ಮಿಟ್ಟಿ ಶಂಕರ, ರಾಜೇಶವರ್ಮ, ಗದ್ಗಿ ವಿರುಪಾಕ್ಷಿ, ತುಳಸಿ ರಾಮಚಂದ್ರ, ಶೀಲವಂತರ ನೀಲಕಂಠ, ಒನಕಿ