ವಂಚನೆ, ಮೌಢ್ಯ ಖಂಡಿಸಿದ್ದ ನಿಷ್ಠುರವಾದಿ

Untitled design (22)
ಕಂಪ್ಲಿಯ ತಹಸಿಲ್ ಕಚೇರಿಯಲ್ಲಿ ಏರ್ಪಡಿಸಿದ್ದ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ತಹಸೀಲ್ದಾರ್ ಶಿವರಾಜ ಮಾತನಾಡಿದರು. ಪ್ರಮುಖರಾದ ಬಿ.ಸಿದ್ದಪ್ಪ, ಕರೇಕಲ್ ಮನೋಹರ, ಬಿ.ವೀರಭದ್ರಪ್ಪ, ಕರೇಕಲ್ ಪ್ರಕಾಶ, ಜಿ.ಯಲ್ಲಪ್ಪ ಇತರರಿದ್ದರು.
Published on

ಕಂಪ್ಲಿ: ನಿಜಶರಣ ಅಂಬಿಗರ ಚೌಡಯ್ಯ ಅವರ ವಚನಗಳು ಸಮಾಜದ ಅಂಕುಡೊಂಕು ತಿದ್ದುವ ಜತೆಗೆ ನೈತಿಕತೆ, ಪ್ರಾಮಾಣಿಕತೆಯನ್ನು ಬಿಂಬಿಸುತ್ತವೆ ಎಂದು ತಹಸೀಲ್ದಾರ್ ಶಿವರಾಜ ಹೇಳಿದರು.

ಮೋಸ, ಕಪಟ, ವಂಚನೆ, ಡಾಂಭಿಕತೆಯನ್ನು ಖಂಡಿಸಿದ ಶರಣ

ಪಟ್ಟಣದ ತಹಸಿಲ್ ಕಚೇರಿ ಸಭಾಂಗಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಭಾನುವಾರ ಮಾತನಾಡಿದರು. ನಿಷ್ಠುರ ಶರಣನಾದ ಚೌಡಯ್ಯ ಅವರು ಮೋಸ, ಕಪಟ, ವಂಚನೆ, ಡಾಂಭಿಕತೆಯನ್ನು ಖಂಡಿಸಿದ್ದರು ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಬಿ.ಸಿದ್ದಪ್ಪ ಮಾತನಾಡಿ, ಲೋಕಸಭೆ ಚುನಾವಣೆಯೊಳಗೆ ಗಂಗಾಮತಸ್ಥರನ್ನು ಎಸ್ಟಿಗೆ ಸೇರಿಸದಿದ್ದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಲಾಗುತ್ತದೆ. ಸಮುದಾಯ ಎಸ್ಟಿಗೆ ಸೇರುವ ಅರ್ಹತೆ ಹೊಂದಿದೆ. ಆದರೆ ಸರ್ಕಾರಗಳು ಎಸ್ಟಿಗೆ ಸೇರಿಸುವಲ್ಲಿ ಮೀನಮೇಷ ಎಣಿಸುತ್ತಿವೆ. ಸಿಎಂ ಸಿದ್ದರಾಮಯ್ಯ ಗಂಗಾಮತಸ್ಥರನ್ನು ಎಸ್ಟಿಗೆ ಸೇರಿಸಲು ಮತ್ತೊಮ್ಮೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ ಸಚಿವ ಪ್ರಹ್ಲಾದ ಜೋಶಿ ಎಸ್ಟಿಗೆ ಸೇರಿಸುವಂತೆ ಕೇಂದ್ರದ ಗಮನಸೆಳೆಯುವುದಾಗಿ ಭರವಸೆ ನೀಡಿದ್ದಾರೆ. ನಾಯಕರು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ ಎಂದು ಒತ್ತಾಯಿಸಿದರು. ಸಮುದಾಯದ ಮುಖಂಡ ಕರೇಕಲ್ ಮನೋಹರ ಮಾತನಾಡಿದರು.

ವಿದ್ಯಾರ್ಥಿನಿ ಎಸ್.ಪೂಜಾ ಅವರಿಂದ ವಚನ ಗಾಯನ ನಡೆಯಿತು. ನಿಜಶರಣ ಅಂಬಿಗರ ಚೌಡಯ್ಯ ಸಂಘದ ತಾಲೂಕಾಧ್ಯಕ್ಷ ಕರೇಕಲ್ ಪ್ರಕಾಶ, ಉಪಾಧ್ಯಕ್ಷ ಜಿ.ಯಲ್ಲಪ್ಪ, ಗಂಗಾಮತಸ್ಥರ ಸಂಘದ ಪದಾಧಿಕಾರಿಗಳಾದ ಬಿ.ವೀರಭದ್ರಪ್ಪ, ಬಿ.ಈರಪ್ಪ, ಯು.ವೆಂಕಟೇಶ, ಜೆ.ಈರಪ್ಪ, ಯು.ವಿರುಪಣ್ಣ, ಎಸ್.ಸುರೇಶ, ಗಂಗಣ್ಣ, ಮಹೇಶ, ಅಯ್ಯೋಧಿ ವಾಸುದೇವ, ಕಾಶಿ, ಹಟ್ಟಿ ಸಂದೀಪ್, ಗಿರೀಶ, ಪುನೀತ, ಎಲ್.ನಾಗೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net