ಗಂಗಾವತಿಯಿಂದ ದರೋಜಿಗೆ 6 ಸ್ಟೇಷನ್

Kampli new train rute
ಗಂಗಾವತಿಯಿಂದ ಕಂಪ್ಲಿ ಮೂಲಕ ದರೋಜಿಗೆ ಸಂಪರ್ಕ ಕಲ್ಪಿಸುವ ಉದ್ದೇಶಿತ ರೈಲು ಮಾರ್ಗ, ನಿಲ್ದಾಣಗಳ ಮಾಹಿತಿ.
Published on

ಕಂಪ್ಲಿ: ಗಂಗಾವತಿಯಿಂದ ಕಂಪ್ಲಿ ಮೂಲಕ ದರೋಜಿಗೆ ಸಂಪರ್ಕ ಕಲ್ಪಿಸುವ ಬ್ರಾಡ್‌ಗೇಜ್ ರೈಲು ಮಾರ್ಗದ ಸಮೀಕ್ಷೆ ಮುಗಿದಿದ್ದು, ಆರು ನಿಲ್ದಾಣಗಳನ್ನು ಆರಂಭಿಸುವ ಕುರಿತ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಗಂಗಾವತಿ ರೈಲು ನಿಲ್ದಾಣದಿಂದ ದರೋಜಿ ರೈಲ್ವೆ ನಿಲ್ದಾಣಕ್ಕೆ 31.30 ಕಿ.ಮೀ. ಅಂತರವಿದೆ. ಗಂಗಾವತಿ

ಯಿಂದ ಕಂಪ್ಲಿ 10.77 ಕಿ.ಮೀ. ಅಲ್ಲಿಂದ ದೇವಸಮುದ್ರ 3.22 ಕಿ.ಮೀ., ಜವುಕು 4.70 ಕಿ.ಮೀ., ಸುಗ್ಗೇನಹಳ್ಳಿ 5 ಕಿ.ಮೀ., ಅಲ್ಲಿಂದ ದರೋಜಿಗೆ 7.60 ಕಿ.ಮೀ. ಅಂತರ ವಿದೆ. ಗಂಗಾವತಿಯಿಂದ ದರೋಜಿ ಬ್ರಾಡ್‌ಗೇಜ್ ರೈಲು ಮಾರ್ಗಕ್ಕೆ 919.49 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ಆರಂಭಿಸುವಂತೆ ಈಗಾಗಲೇ ಹಲವು ಬಾರಿ ನಿಯೋಗ ತೆರಳಿ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹಾಗೂ ಸಂಬಂಧಿಸಿದ ಅಧಿಕಾರಿಗಳು, ಶಾಸಕ, ಸಂಸದರಿಗೆ ಮನವಿ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಗೊಳ್ಳಬೇಕಿದೆ ಎಂದು ಕಂಪ್ಲಿ ತಾಲೂಕು ರೈಲ್ವೆ ಮಾರ್ಗಕ್ಕಾಗಿ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ತಿಳಿಸಿದ್ದಾರೆ.

ಗಂಗಾವತಿ-ದರೋಜಿ ಬ್ರಾಡ್‌ಗೇಜ್ ರೈಲು ಮಾರ್ಗದ ಸಮೀಕ್ಷೆಯಲ್ಲಿ 10ಕ್ಕೆ 6.50 ಅಂಕ ಬಂದಿದ್ದು, ಈ ಮಾರ್ಗ ಲಾಭದಾಯಕವಾಗಿದೆ. ರಾಸಾಯನಿಕ, ಸಿಮೆಂಟ್, ಸ್ಟೀಲ್, ಭತ್ತ, ಕಚ್ಚಾವಸ್ತು ಸೇರಿದಂತೆ ನಾನಾ ಸರಕುಗಳ ಸಾಗಣೆಗೆ ಅನುಕೂಲವಾಗಲಿದೆ. ಮಾರ್ಗದ ಕಾಮಗಾರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುದಾನ ಬಿಡುಗಡೆಗೊಳಿಸಬೇಕೆಂದು ನೈಋತ್ಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಗಂಗಾವತಿಯ ಅಶೋಕಸ್ವಾಮಿ ಹೇರೂರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net