ನೂತನ ಕೃಷಿ ಕಾಯ್ದೆಗಳ ಜಾರಿ ವಿರೋಧಿಸಿ ದೇಶ ಪ್ರೇಮಿ ಯುವ ಆಂದೋಲನದಿಂದ ಸೈಕಲ್ ಜಾಥಾ

04012021 Kampli youth cycle raly
Published on

ಕಂಪ್ಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿದ ಕೃಷಿ ಕಾಯ್ದೆಗಳ ವಿರೋಧಿಸಿ ದೇಶ ಪ್ರೇಮಿ ಯುವ ಆಂದೋಲನದಿಂದ ಪಟ್ಟಣದಲ್ಲಿ ಭಾನುವಾರ ಸೈಕಲ್ ಜಾಥಾ ನಡೆಸಿತು.

ಮುಖಂಡ ಎಚ್.ಸಂತೋಷ್ ಮಾತನಾಡಿ, ರೈತರ ಹಿತಾಸಕ್ತಿಗೆ ವಿರುದ್ಧವಾದ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಉಭಯ ಸರ್ಕಾರಗಳು ಕೈಬಿಡಬೇಕು. ರೈತರಿಗೆ ಅನುಕೂಲವಾದ ಕಾನೂನುಗಳನ್ನು ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿದರು.

ಪಟ್ಟಣದ ಆಯಕಟ್ಟಿನ ಸ್ಥಳಗಳಲ್ಲಿ ಯುವಕರು ರೈತ ವಿರೋಧಿ ಕಾಯ್ದೆಗಳ ಕುರಿತು ಕ್ರಾಂತಿ ಗೀತೆಗಳನ್ನು ಹಾಡಿದರು. ಕರಪತ್ರಗಳನ್ನು ಹಂಚಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ದೇಶ ಪ್ರೇಮಿ ಯುವ ಆಂದೋಲನದ ಪ್ರಮುಖರಾದ ಎಂ.ರಾಜೇಂದ್ರ ರಾಜವಳ, ಗುರುಬಸವ, ಮರಿಸ್ವಾಮಿ, ದುರ್ಗೇಶ್, ಶರಣು, ಭುವನ್‌ಕುಮಾರ್, ಇಸ್ಮಾಯಿಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net