ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ - ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೇರ್ ಸಲಹೆ

KAMPLI 04A
ನೆಲ್ಲೂಡಿ ಪ್ರಯಾಣಿಕರ ತಂಗುದಾಣದಲ್ಲಿ ಪುಸ್ತಕ ಗೂಡನ್ನು ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೇರ್ ಉದ್ಘಾಟಿಸಿದರು. ಪ್ರಮುಖರಾದ ಜಯಮ್ಮ, ಆರ್.ಕೆ.ಶ್ರೀಕುಮಾರ್, ಕೆ.ಎಸ್.ಮಲ್ಲನಗೌಡ, ಹಾಲಹರವಿ ಶೇಷಗಿರಿ, ರಾಜಸಾಬ್ ಇತರರಿದ್ದರು.
Published on

ಕಂಪ್ಲಿ: ಪ್ರಯಾಣಿಕರು ಬಸ್ಸಿಗಾಗಿ ಕಾಯುವ ಸಮಯದಲ್ಲಿ ಪುಸ್ತಕ ಓದುವ ಮೂಲಕ ಸಮಯ ಸದುಪಯೋಗಪಡಿಸಿಕೊಳ್ಳಬೇಕು ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೇರ್ ಹೇಳಿದರು.

ನೆಲ್ಲೂಡಿ ಗ್ರಾಪಂ.ಕಚೇರಿ ಬಳಿಯ ಪ್ರಯಾಣಿಕರ ತಂಗುದಾಣದಲ್ಲಿ ಬುಧವಾರ ಪುಸ್ತಕ ಗೂಡು ಉದ್ಘಾಟಿಸಿ ಮಾತನಾಡಿ, ಎಲ್ಲರೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಪಿಡಿಒ, ಕಾರ್ಯದರ್ಶಿ, ತಾಪಂ.ಸಿಬ್ಬಂದಿಯೊಂದಿಗೆ ಚರ್ಚಿಸಿ, ಎಲ್ಲ ಅಧಿಕಾರಿಗಳು ಸಕಾಲಕ್ಕೆ ಸೇವೆ ಒದಗಿಸಬೇಕು ಮತ್ತು ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಸಲಹೆ ನೀಡಿದರು.

ಆಡಳಿತ ಸೌಧದ ಬಳಿ ನಿರ್ಮಾಣಗೊಳ್ಳುತ್ತಿರುವ ತಾಪಂ ಕಟ್ಟಡ ವೀಕ್ಷಿಸಿದರು. ಬಳಿಕ ತಾಪಂ ಕಚೇರಿಗೆ ಭೇಟಿ ನೀಡಿ, ನರೇಗಾ, 15ನೇ ಹಣಕಾಸು, ತೆರಿಗೆ ವಸೂಲಾತಿ, ಎನ್‌ಆರ್‌ಎಲ್‌ಎಂ ಬೇಸಿಗೆಯಲ್ಲಿ ಕುಡಿವ ನೀರಿನ ಪೂರೈಕೆಯ ಪ್ರಗತಿ ಪರಿಶೀಲಿಸಿದರು. ತಾಪಂ ಇಒ ಆರ್.ಕೆ.ಶ್ರೀಕುಮಾರ್, ಎಡಿ ಕೆ.ಎಸ್.ಮಲ್ಲನಗೌಡ, ಗ್ರಾಪಂ.ಅಧ್ಯಕ್ಷೆ ಜಯಮ್ಮ, ಪಿಡಿಒ ಹಾಲಹರವಿ ಶೇಷಗಿರಿ, ಸದಸ್ಯರಾದ ಧನಂಜಯ, ಚಂದ್ರಕಲಾ, ಉಮೇಶ, ಕರವಸೂಲಿಗಾರ ರಾಜಸಾಬ್, ರಾಜೀವ್‌ಗಾಂಧಿ ಫೆಲೋ ಸಲ್ಮಾಬೇಗಂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net