ಕಂಪ್ಲಿಯ ನಾಡಕಚೇರಿ ಆವರಣದಲ್ಲಿ ಎಂಟು ಜನರ ಮೇಲೆ ಹೆಜ್ಜೇನು ದಾಳಿ, ಆಸ್ಪತ್ರೆಗೆ ದಾಖಲು

050620 Kampli Bees Attack
Published on

ಕಂಪ್ಲಿ: ಪಟ್ಟಣದ ನಾಡ ಕಚೇರಿ ಆವರಣದಲ್ಲಿ ಗುರುವಾರ ಮಧ್ಯಾಹ್ನ ಎಂಟು ಜನರ ಮೇಲೆ ಹೆಜ್ಜೇನು ದಾಳಿ ಮಾಡಿವೆ. ಕಚೇರಿ ಮುಂದಿರುವ ಬೇವಿನ ಮರದಲ್ಲಿ ಜೇನು ಹುಳುಗಳು ಗೂಡು ಕಟ್ಟಿವೆ. ಏಕಾಏಕಿ ಜೇನು ಹುಳುಗಳು ಎದ್ದಿದ್ದು, ಗ್ರಾಮಲೆಕ್ಕಾಧಿಕಾರಿ ಕೊಟ್ರೇಶ್, ತಳವಾರ ರಾಘು ಸೇರಿ ವಿವಿಧ ಕೆಲಸಗಳ ನಿಮಿತ್ತ ಕಚೇರಿಗೆ ಬಂದಿದ್ದ 8 ಜನರಿಗೆ ಕಚ್ಚಿವೆ. ಕೂಡಲೇ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ವೈದ್ಯಾಧಿಕಾರಿ ರವೀಂದ್ರ ಕನಕೇರಿ ಮಾತನಾಡಿ, ಜೇನು ಹುಳು ಕಡಿತಕ್ಕೆ ಒಳಗಾದ ಎಂಟು ಜನರಲ್ಲಿ ಒಬ್ಬರನ್ನು ವಿಮ್ಸ್‌ಗೆ ಕಳುಹಿಸಲಾಗಿದೆ. ಉಳಿದವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರು. ತಹಸೀಲ್ದಾರ್ ಎಂ.ರೇಣುಕಾ ಪ್ರತಿಕ್ರಿಯಿಸಿ, ಇನ್ನೊಂದು ವಾರದಲ್ಲಿ ಜೇನುಗೂಡು ತೆರವುಗೊಳಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net