

ಕಂಪ್ಲಿ: ಇಲ್ಲಿನ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಬಿಜೆಪಿ ಗೆಲುವಿನ ನಗೆ ಬೀರಿತು. ವಿ.ಶಾಂತಲಾ ವಿದ್ಯಾಧರ, ನಿರ್ಮಲಾ ವಸಂತ್ ಅಧ್ಯಕ್ಷೆ, ಉಪಾಧ್ಯಕ್ಷರಾಗಿ ಆಯ್ಕೆಯಾದರು.
23 ಸದಸ್ಯ ಬಲದ ಪುರಸಭೆಯಲ್ಲಿ 13 ಬಿಜೆಪಿ, 10 ಕಾಂಗ್ರೆಸ್ ಸದಸ್ಯರಿದ್ದಾರೆ. ಸಾಮಾನ್ಯ ಮಹಿಳೆಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ವಿ.ಶಾಂತಲಾ, ಕಾಂಗ್ರೆಸ್‌ನ ಸುಶೀಲಾ ಹಾಗೂ ಹಿಂದುಳಿದ ವರ್ಗ ಅ-ಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ನಿರ್ಮಲಾ, ಕಾಂಗ್ರೆಸ್‌ನ ಎಂ.ಉಸ್ಮಾನ್ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯ 13 ಸದಸ್ಯರ ಬೆಂಬಲ ಪಡೆದ ಶಾಂತಲಾ ಹಾಗೂ ನಿರ್ಮಲಾ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದರು.
ತಹಸೀಲ್ದಾರ್ ಗೌಸಿಯಾಬೇಗಂ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.ಮುಖ್ಯಾಧಿಕಾರಿ ರಮೇಶ್ ಬಡಿಗೇರ, ಉಪ ತಹಸೀಲ್ದಾರ್ ಬಿ.ರವೀಂದ್ರನಾಥ ಇತರರಿದ್ದರು. ಬಿಜೆಪಿ ಸದಸ್ಯರಾದ ವಿ.ಎಲ್.ಬಾಬು ತಿಮ್ಮಕ್ಕ, ಟಿ.ವಿ.ಸುದರ್ಶನರೆಡ್ಡಿ, ಪಾರ್ವತಿ, ಎಸ್.ಎಂ.ನಾಗರಾಜ, ಸಿ.ಆರ್.ಹನುಮಂತಪ್ಪ, ಗಂಗಮ್ಮ ಉಡೇಗೋಳ್, ಎನ್.ರಾಮಾಂಜನೇಯಲು, ಎಚ್.ಹೇಮಾವತಿ, ಆರ್.ಆಂಜನೇಯ, ರಮೇಶ್ ಹೂಗಾರ, ಕಾಂಗ್ರೆಸ್ ಸದಸ್ಯರಾದ ನಾಗಮ್ಮ, ಚಾಂದ್‌ಬಾಷಾ, ಜಿ.ಸುಮಾ, ಬಿ.ಪ್ರಸಾದ್, ಮೌಲಾ, ಗುಡದಮ್ಮ, ಎಂ.ಹೊನ್ನೂರವಲಿ, ವೀರಾಂಜನೇಯಲು ಪಾಲ್ಗೊಂಡಿದ್ದರು. ಆಯ್ಕೆಗೊಂಡ ಅಧ್ಯಕ್ಷ, ಉಪಾಧ್ಯಕ್ಷರನ್ನು ಮಾಜಿ ಶಾಸಕ ಟಿ.ಎಚ್.ಸುರೇಶ್ ಬಾಬು, ಪುರಸಭೆ ಸದಸ್ಯರು, ಬಿಜೆಪಿ ಕಾರ್ಯಕರ್ತರು ಸನ್ಮಾನಿಸಿದರು.