ನಿಯೋಜನೆಗೊಂಡರೂ ಕರ್ತವ್ಯಕ್ಕೆ ಹಾಜರಾಗದ ಪಶುವೈದ್ಯರು

Kampli GN Ganesh MLA
ಜೆ.ಎನ್.ಗಣೇಶ್
Published on

ಕಂಪ್ಲಿ: ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಜೆ.ಎನ್.ಗಣೇಶ್ ಪಶು ಇಲಾಖೆಗೆ ಸಂಬಂಧಿಸಿದ ಪ್ರಶ್ನೆ ಕೇಳಿದರು. ಕಂಪ್ಲಿ ಹಾಗೂ ಕುರುಗೋಡು ತಾಲೂಕಿನಲ್ಲಿ ಸುಮಾರು ಎರಡು ಲಕ್ಷ ಜಾನುವಾರುಗಳಿದ್ದು ನಾಲ್ವರು ಪಶು ವೈದ್ಯರಿದ್ದಾರೆ. ಪಶು ವೈದ್ಯರು ಇನ್ನೂ ಕರ್ತವ್ಯಕ್ಕೆ ವರದಿ ಮಾಡಿಕೊಂಡಿಲ್ಲ. ಕೂಡಲೇ ವೈದ್ಯರ ನಿಯೋಜನೆ ಮಾಡಬೇಕೆಂದು ಆಗ್ರಹಿಸಿದರು.

ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ 32 ಜನ ಪಶು ವೈದ್ಯರನ್ನು ನೇಮಕ ಮಾಡಿದ್ದು 27 ವೈದ್ಯರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ವೈದ್ಯರ ನೇಮಕಕ್ಕೆ ಸಿಎಂಗೆ ಮನವಿ ಮಾಡುವುದಾಗಿ ತಿಳಿಸಿದರು.

ಕುರಿಗಳಿಗೆ ಪೌಷ್ಟಿಕ ಆಹಾರ ನೀಡುತ್ತಿಲ್ಲ. ತಾಲೂಕಿನಲ್ಲಿ ಇಬ್ಬರು ಪಶು ವೈದ್ಯರಿರುವುದರಿಂದ ಕುರಿ ಸತ್ತಾಗ ಜಿಲ್ಲಾ ಕೇಂದ್ರಕ್ಕೆ ತೆರಳಲು ಹೇಳುತ್ತಾರೆ. ಔಷಧಗಳ ಕೊರತೆ ಬಹಳಷ್ಟಿದೆ ಎಂದು ಶಾಸಕ ದೂರಿದರು. ವೈದ್ಯರೇ ಕುರಿ ಸತ್ತ ಸ್ಥಳಕ್ಕೆ ಹೋಗಿ ಪೋಸ್ಟ್ ಮಾರ್ಟಮ್ ಮಾಡುವಂತೆ ಆದೇಶ ನೀಡಲಾಗಿದೆ. ಸರ್ಕಾರದ ಆದೇಶ ಉಲ್ಲಂಘಿಸುವ ಪಶು ವೈದ್ಯರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ವೈದ್ಯಾಧಿಕಾರಿಗಳು ಕುರಿ ಸತ್ತಲ್ಲಿಗೆ ಬರುವುದಿಲ್ಲ. 100 ಕುರಿಗಳಿಗೆ ಆರೋಗ್ಯ ಸಮಸ್ಯೆ ಇದ್ದರೆ 10 ಕುರಿಗಳಿಗೆ ಔಷಧ ನೀಡಲಾಗುತ್ತದೆ. ರಾಮಸಾಗರ

ಗ್ರಾಮದಲ್ಲಿ ಪಶು ಆಸ್ಪತ್ರೆ ಮಂಜೂರಾಗಿದ್ದು ವೈದ್ಯರಿಲ್ಲ. ಕೂಡಲೇ ಪಶು ವೈದ್ಯ, ಅಗತ್ಯ ಸಿಬ್ಬಂದಿ ನೇಮಕಕ್ಕೆ ಶಾಸಕ ಒತ್ತಾಯಿಸಿದರು. ಯಾವ ಔಷಧದ ಕೊರತೆಯಿದೆ ಎಂದು ಪಟ್ಟಿ ನೀಡಿ ಒದಗಿಸಲಾಗುತ್ತದೆ ಎಂದು ಸ್ಪೀಕರ್ ಯು.ಟಿ.ಖಾದರ್ ಶಾಸಕರಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net