ಮಕ್ಕಳ ಏಳಿಗೆಯಲ್ಲಿ ಶಿಕ್ಷಕರ ಏಳಿಗೆ ಅಡಗಿದೆ

05092022 Kampli teacher day
Published on


ಕಂಪ್ಲಿ: ಶಿಕ್ಷಕ ವೃತ್ತಿ ಪವಿತ್ರವಾಗಿದ್ದು ಮಕ್ಕಳ ಏಳಿಗೆಯಲ್ಲಿಯೇ ಶಿಕ್ಷಕರ ಏಳಿಗೆ ಅಡಗಿದೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.

ತಾಲೂಕಿನ ಮೆಟ್ರಿ ಗ್ರಾಮದ ಹೊನ್ನಳ್ಳಿ ಸಿದ್ದಪ್ಪನವರ ಸಹಿಪ್ರಾ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಕ್ಕಳ ಮನಸ್ಸನ್ನರಿತು ಶಿಕ್ಷಣ ನೀಡುವಲ್ಲಿ ಶಿಕ್ಷಕರು ಜಾಗೃತಿ ತೋರಬೇಕು ಎಂದರು. ಶಿಕ್ಷಕ ದಿನಾಚರಣೆ ನಿಮಿತ್ತ ಮುಖ್ಯಶಿಕ್ಷಕ ಗುಂಡಪ್ಪ, ಶಿಕ್ಷಕರಾದ ವಿ.ಆರ್.ಮೂರ್ತಿ, ಮಡಿವಾಳಪ್ಪ, ಅನಸೂಯ, ಚಂದ್ರಪ್ಪ ಅವರನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net