ನಿವೃತ್ತ ನೌಕರರಿಗೆ ಪರಿಷ್ಕೃತ ವೇತನ ನೀಡಲಿ

13 KAMPLI 03
Published on

ಕಂಪ್ಲಿ: ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಕಟ್ಟಡಕ್ಕೆ ಪುರಸಭೆ ಆಡಳಿತ ನಿವೇಶನ ಒದಗಿಸಿದಲ್ಲಿ, ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಶಾಸಕ ಜೆ.ಎನ್.ಗಣೇಶ್ ಭರವಸೆ ನೀಡಿದರು.

ಪಟ್ಟಣದಲ್ಲಿ ಗುರುವಾರ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಸಮಾವೇಶದಲ್ಲಿ ಮಾತನಾಡಿದರು. ಸಂಘದ ಅಧ್ಯಕ್ಷ ಎಂ.ಎಸ್.ಗಂಗಾಧರಯ್ಯ ಮಾತನಾಡಿ, ಏಳನೇ ವೇತನ ಆಯೋಗದ ಅನುಷ್ಠಾನದಲ್ಲಿ 2022ನೇ ಜು.1ರಿಂದ 2024ರ ಜು.31ರ ಅವಧಿಯಲ್ಲಿ ನಿವೃತ್ತಿ ನಿಧನ ಹೊಂದಿದ ನೌಕರರಿಗೆ ಪರಿಷ್ಕೃತ ಮೂಲ ವೇತನದ ಆರ್ಥಿಕ ಸೌಲಭ್ಯ ದೊರಕಿಸಿಕೊಡುವಂತೆ ಒತ್ತಾಯಿಸಿದರು.

70ವರ್ಷ ಮೇಲ್ಪಟ್ಟ, ಹಿರಿಯ ನಿವೃತ್ತ ನೌಕರರನ್ನು ಗೌರವಿಸಲಾಯಿತು. ತಹಸೀಲ್ದಾರ್ ಎಸ್.ಶಿವರಾಜ, ಅಕ್ಕಿಗಿರಣಿ ಮಾಲೀಕರ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ, ಪುರಸಭೆ ಸದಸ್ಯ ಎಸ್.ಎಂ.ನಾಗರಾಜ, ಆರ್ಯವೈಶ್ಯ ಸಂಘದ ತಾಲೂಕು ಅಧ್ಯಕ್ಷ ಡಿ.ವಿ.ಸುಬ್ಬಾರಾವ್, ಪ್ರಮುಖರಾದ ಡಿ.ಮೌನೇಶ, ಜಿ.ವಿ.ಸತ್ಯನಾರಾಯಣ, ಎಸ್.ಜಿ.ಚಿತ್ರಗಾರ, ಡಾ.ಜಗನ್ನಾಥ ಹಿರೇಮಠ, ಸಂಘದ ಪದಾಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net