ಏತ ನೀರಾವರಿ ವ್ಯವಸ್ಥೆಗೆ ಯತ್ನ; ಮೆಟ್ರಿ ಗ್ರಾಮಸ್ಥರಿಗೆ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಭರವಸೆ

29082022 Kampli MLA news
Published on

ಕಂಪ್ಲಿ: ಮೆಟ್ರಿ ಗ್ರಾಮದ ಸೂಲಗಿತ್ತಿ ಮಟ್ಟಿಯ ಚೌಡಮ್ಮ ಮ್ಯಾಗಳ ಅಡವಿ ಬಳಿ ಏತ ನೀರಾವರಿ ವ್ಯವಸ್ಥೆ ಕಲ್ಪಿಸುವುದಾಗಿ ಶಾಸಕ ಜೆ.ಎನ್.ಗಣೇಶ್ ಹೇಳಿದರು.ತಾಲೂಕಿನ ಮೆಟ್ರಿ ಗ್ರಾಮದ ಹೊನ್ನಳ್ಳಿ ಸಿದ್ದಪ್ಪನವರ ಸಹಿಪ್ರಾ ಶಾಲೆ ಆವರಣದಲ್ಲಿ ಆರ್‌ಎಂಎಸ್‌ಎ ಯೋಜನಡಿ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿಗೆ ಚಾಲನೆ ನೀಡಿ ಮಾತನಾಡಿದರು. 14ವರ್ಷಗಳ ಹೋರಾಟದ ಫಲವಾಗಿ ನನ್ನ ಅವಧಿಯಲ್ಲಿ ಪ್ರೌಢಶಾಲೆ ಆರಂಭಗೊಂಡಿದೆ. ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವಲ್ಲಿ ಪಾಲಕರು ನಿಗಾವಹಿಸಬೇಕು ಎಂದರು.

ಪ್ರೌಢಶಾಲೆ ಹೋರಾಟ ಸಮಿತಿಯ ಪ್ರಮುಖರಾದ ಎಚ್.ಶಂಕರ್, ಎಚ್.ಕುಮಾರಸ್ವಾಮಿ, ನೇಣ್ಕಿ ಗಿರೀಶ್, ಮಲ್ಲಿಕಾರ್ಜುನ, ಕೋಳೂರು ಗಂಗಾಧರ, ಸಿ.ಡಿ.ರಾಜಶೇಖರ್, ರಾಜ, ಜಡೆಪ್ಪ ಇತರರು ಶಾಸಕಗೆ ಮನವಿ ಸಲ್ಲಿಸಿ, ಶಾಲೆಗೆ ಶೌಚಗೃಹ ವ್ಯವಸ್ಥೆ, ಶಿಥಿಲಗೊಂಡ ಕೊಠಡಿಗಳ ತೆರವು ಮತ್ತು ಹೊಸ ಕೊಠಡಿಗಳ ನಿರ್ಮಾಣ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪನೆಗೆ ಒತ್ತಾಯಿಸಿದರು.

ಶಿಕ್ಷಕ ವಿ.ಆರ್.ಮೂರ್ತಿ, ಪ್ರಮುಖರಾದ ಹೊನ್ನಳ್ಳಿ ಗಂಗಾಧರ, ವಕೀಲ ರಾಘವೇಂದ್ರರಾವ್, ಎಂ.ವೆಂಕಟೇಶ್ವರರಾವ್, ಕೆ.ಗುಂಡಪ್ಪ, ಸರ್ಕಾರಿ ಶಿಕ್ಷಕರ ಸಂಘದ ಅಧ್ಯಕ್ಷರಾದ ಹನುಮಂತಪ್ಪ, ಟಿ.ಎಂ.ಬಸವರಾಜ್, ಕಾರ್ಯದರ್ಶಿ ದೊಡ್ಡಬಸಪ್ಪ, ರಮೇಶ್ ಚಲವಾದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net