ಬಸವಣ್ಣನ ತತ್ವ ಸಮ ಸಮಾಜಕೆಕ ಅಡಿಪಾಯ; ಶಾಸಕ ಜಿ.ಎನ್.ಗಣೇಶ ಅಭಿಪ್ರಾಯ

29052022 Kampli basava jayanti
Published on

ಧರ್ಮಗುರುವಿನ ಪ್ರತಿಮೆಯ ಮೆರವಣಿಗೆ


ಕಂಪ್ಲಿ : ಬಸವಣ್ಣನ ತತ್ವಗಳು ಸರ್ವ ಸಮಾನತೆಯ ಸಮಾಜ ನಿರ್ಮಾಣಕ್ಕೆ ಅಡಿಪಾಯ ಎಂದು ಶಾಸಕ ಜಿ.ಎನ್.ಗಣೇಶ ಅಭಿಪ್ರಾಯಪಟ್ಟರು.

ಲಿಂ.ಶರಣ ಹರ್ಡೇಕರ್ ಮಂಜಪ್ಪ ಆರಂಭಿಸಿದ 110ನೇ ವರ್ಷದ ಬಸವ ಜಯಂತಿ ನಿಮಿತ್ತ ಗುರು ಭಕ್ತಿಭಂಡಾರಿ ಶ್ರೀ ಬಸವೇಶ್ವರ ದಾಸೋಹ ಆಶ್ರಮ ಭಾನುವಾರ ಆಯೋಜಿಸಿದ್ದ ಬಸವಣ್ಣನವರ ಪ್ರತಿಮೆಯ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು. ಬಸವಣ್ಣನ ತತ್ವ, ಚಿಂತನೆ ಮತ್ತು ವಚನಗಳನ್ನು ಮಕ್ಕಳಿಗೆ ಕಲಿಸುವಲ್ಲಿ ಪಾಲಕರು ಮುಂದಾಗಬೇಕು ಎಂದರು.

ಭಕ್ತಿಭಂಡಾರಿ ಬಸವೇಶ್ವರ ದಾಸೋಹ ಆಶ್ರಮದ ಪೀಠಾಧ್ಯಕ್ಷ ಪಾಮಯ್ಯ ಶರಣರು, ಕಲ್ಮಠದ ಕಾರ್ಯಾಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ, ಗಂಗಾವತಿ ಬಸವದಳದ ಅಧ್ಯಕ್ಷ ದೀಲೀಪ್ ಕುಮಾರ್, ಸದಸ್ಯ ವೀರೇಶ್, ಪ್ರಮುಖರಾದ ಬಿ.ವೀರಭದ್ರಪ್ಪ, ರುದ್ರಪ್ಪ ಗುಂಡ್ಲವದ್ದಿಗೇರಿ, ಕೆ.ಪಂಪಣ್ಣ, ಸಿ.ಗೌರಮ್ಮ ಕೊರ‌್ಲಗುಂದಿ, ರತ್ನಮ್ಮ ರಾಮಸಾಗರ, ತಾಯಮ್ಮ ಗುಂಡ್ಲವದ್ದಿಗೇರಿ, ರೇಣುಕಮ್ಮ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net