ಶಾಸಕ ಯತ್ನಾಳ ವಜಾಕ್ಕೆ ಶಾಸಕರು ಒತ್ತಡ ಹೇರಲಿ, ಸಿಪಿಐಎಂನ ವಿ.ಎಸ್.ಶಿವಶಂಕರ್ ಒತ್ತಾಯ

10032020 Kampli CPIM Meeting
Published on

ಕಂಪ್ಲಿ: ಮಹರ್ಷಿ ವಾಲ್ಮೀಕಿ ಕುರಿತು ಅವಹೇಳನ ಹೇಳಿಕೆ ನೀಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳರನ್ನು ಕೂಡಲೇ ಬಂಧಿಸಿ, ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಮಾ.11ರಂದು ಜಿಲ್ಲೆಯ ಎಲ್ಲ ತಾಲೂಕು ಕಚೇರಿಗಳ ಮುಂಭಾಗದಲ್ಲಿ, ಸಿಪಿಐಎಂ ಹಾಗೂ ದಲಿತ ಹಕ್ಕುಗಳ ಸಮಿತಿಗಳ ಆಶ್ರಯದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಿಪಿಐಎಂ ಜಿಲ್ಲಾ ಸಮಿತಿ ಮುಖಂಡ ವಿ.ಎಸ್.ಶಿವಶಂಕರ್ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಿಪಿಐಎಂ ಪದಾಧಿಕಾರಿಗಳ ಸಂಘಟನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅಧಿವೇಶನದಲ್ಲಿ ವಾಲ್ಮೀಕಿ ವಿರುದ್ಧ ಕುಚೋದ್ಯ ಮಾತುಗಳನ್ನು ಆಡಿದ್ದಾರೆ. ಸ್ಪೀಕರ್ ಕೂಡಲೇ ಯತ್ನಾಳರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು. ಈ ಬಗ್ಗೆ ಪರಿಶಿಷ್ಟ ಪಂಗಡದ 15 ಶಾಸಕರು ಒತ್ತಡ ಹೇರಬೇಕು ಎಂದರು. ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಎಚ್.ತಿಪ್ಪಯ್ಯ, ಸಿಐಟಿಯು ತಾಲೂಕು ಸಂಚಾಲಕ ಬಂಡಿ ಬಸವರಾಜ, ಸಹ ಸಂಚಾಲಕರಾದ ಡಿ.ಮುನಿಸ್ವಾಮಿ, ಮಾನ್ವಿ ಮಹೇಶ್, ಹೊನ್ನೂರಸಾಬ್, ಎನ್.ರಾಜಾಭಕ್ಷಿ, ಆರ್.ನಾಗರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net