ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡಿ

Untitled design(17)
ಕಂಪ್ಲಿ ಕೋಟೆಯ ಮೀನು ಮಾರಾಟಗಾರರೊಂದಿಗೆ ಬಳ್ಳಾರಿಯ ಮೀನುಗಾರಿಕೆ ಉಪ ನಿರ್ದೇಶಕ ಶಿವಣ್ಣ ಸಮಾಲೋಚಿಸಿದರು. ಪುರಸಭೆ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಆರೋಗ್ಯ ನಿರೀಕ್ಷಕ ಪ್ರಕಾಶಬಾಬು, ಮೀನುಗಾರರಾದ ಎಸ್.ಆರ್.ಚಿನ್ನರಾಜು, ರಾಜಶೇಖರ ಇತರರಿದ್ದರು.
Published on

ಕಂಪ್ಲಿ: ರಸ್ತೆ ಬದಿಯಲ್ಲಿ ಮೀನು ಮಾರಾಟ ಮಾಡದೆ ಮೀನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಎಂದು ಬಳ್ಳಾರಿ ಮೀನುಗಾರಿಕೆ ಉಪ ನಿರ್ದೇಶಕ ಶಿವಣ್ಣ ಹೇಳಿದರು.

ಪಟ್ಟಣದಲ್ಲಿ ಗುರುವಾರ ಕೋಟೆಗೆ ಆಗಮಿಸಿ ಮಾರಾಟಗಾರರೊಂದಿಗೆ ಮಾತನಾಡಿ, ರಸ್ತೆ ಬದಿ ಮೀನು ಮಾರಾಟ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಮೀನಿನ ಮೇಲೆ ಕಸ, ಧೂಳು ಹರಡುತ್ತದೆ. ತಾಜಾ ಮೀನು ಮಾರುವಂತೆ, ಶುದ್ಧ ಪರಿಸರದಲ್ಲಿ ಮೀನು ಮಾರುವಂತೆ, ಕೋಳಿ ಮಾಂಸ, ಮಟನ್ ಇದರೊಡನೆ ಮೀನು ಮಾರಾಟ ಮಾಡುವಂತೆ ಸಲಹೆ ನೀಡಿದರು.

ಮೀನುಗಾರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಸ್.ಆರ್.ಚಿನ್ನರಾಜು ಮತ್ತು ಮೀನುಗಾರರು ಮಾತನಾಡಿ, ಮೀನು ಮಾರುಕಟ್ಟೆಯನ್ನು ಸುಸಜ್ಜಿತಗೊಳಿಸಿ ತಕ್ಕ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿದರು. ಪುರಸಭೆ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ ಮಾತನಾಡಿ, ಮಾಂಸ ಮಾರುಕಟ್ಟೆಯಲ್ಲಿಯೇ ಮೀನು ಮಾರಾಟಕ್ಕೆ ಮುಂದಾದಲ್ಲಿ ಅಗತ್ಯ ಸೌಕರ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಆರೋಗ್ಯ ನಿರೀಕ್ಷಕ ಪ್ರಕಾಶಬಾಬು, ಮೀನುಗಾರ ಸಹಕಾರ ಸಂಘದ ಉಪಾಧ್ಯಕ್ಷ ರಾಜಶೇಖರ, ಮೀನುಗಾರರಾದ ನಾಗೇಶ, ಮಾದೇಶ, ಅಶೋಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net