ಕಂಪ್ಲಿಯ ಹಲವೆಡೆ ಉತ್ತಮ ಮಳೆ

xr:d:DAFrCSyoYmU:391,j:1310972236156199227,t:24041313
ಕಂಪ್ಲಿಯಲ್ಲಿ ಶನಿವಾರ ತುಂತುರು ಮಳೆ ಸುರಿಯಿತು.
Published on

ಕಂಪ್ಲಿ: ಪಟ್ಟಣ ಸೇರಿ ವಿವಿಧೆಡೆ ಶನಿವಾರ ಮಳೆ ಸುರಿಯಿತು. ಕೆಲವೆಡೆ ಬಿರುಸಾಗಿದ್ದರೆ, ಮತ್ತೆ ಕೆಲವೆಡೆ ಸಾಧಾರಣವಾಗಿ ಹನಿಯಿತು.

ಶನಿವಾರ ಬೆಳಗ್ಗೆ ಪ್ರಖರ ಬಿಸಿಲಿತ್ತು. ಮಧ್ಯಾಹ್ನವಾದಂತೆ ಮೋಡ ಮುಚ್ಚಿದ ವಾತಾವರಣ ನಿರ್ಮಾಣವಾಯಿತು. ಪಟ್ಟಣದಲ್ಲಿ ಮಧ್ಯಾಹ್ನ 1.10ಕ್ಕೆ ಬಿದ್ದ ವರ್ಷದ ಮೊದಲ ಮಳೆಯೆಂಬ ಹೆಗ್ಗಳಿಕೆ ತುಂತುರು ಮಳೆ ಹನಿಗೆ ಸೀಮಿತವಾಯಿತು. ಜೋರಾಗಿ ಮಳೆಯಾಗುತ್ತೆ ಎನ್ನುವ ನಿರೀಕ್ಷೆ ಹುಸಿಯಾಯಿತು.

ತುಂತುರು ಹನಿಯಲ್ಲಿಯೇ ಜನ ಓಡಾಡಿದರು. ದೇವಸಮುದ್ರ, ಹಂಪಾದೇವನಹಳ್ಳಿ, ಸುಗ್ಗೇನಹಳ್ಳಿ, ಮಾವಿನಹಳ್ಳಿ, ಶ್ರೀರಾಮರಂಗಾಪುರ, ಹಳೇ ದರೋಜಿ ಗ್ರಾಮದಲ್ಲಿ ಅರ್ಧಗಂಟೆ ಉತ್ತಮ ಮಳೆಯಾಗಿ ತಂಪಾಗಿಸಿತು. ಒಂದು ವರ್ಷದ ಬಳಿಕ ಉತ್ತಮ ಮಳೆ ಕಂಡಿದ್ದೇವೆ ಎಂದು ರೈತರು ಸಂತಸ ವ್ಯಕ್ತಪಡಿಸಿದರು.

ಇಟಗಿ, ಕೊಟ್ಟಾಲ್, ಎಮ್ಮಿಗನೂರಿನಲ್ಲಿ ತುಂತುರು ಮಳೆಯಾದರೆ, ರಾಮಸಾಗರ, ಸಣಾಪುರ ಗ್ರಾಮಗಳಲ್ಲಿ ಬರೀ ಗಾಳಿ ಬೀಸಿದೆ. ಬಿಸಿಲ ಧಗೆಯಿಂದ ತತ್ತರಿಸಿದ ಜನರು ಮಳೆಯಿಂದ ನಿರಾಳರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net