ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆ

Holi 2023 Kamanna
ಕಂಪ್ಲಿಯ ನೀಲಕಂಠೇಶ್ವರ ದೇವಸ್ಥಾನದಲ್ಲಿ ಕಾಮನ ಪ್ರತಿಮೆ ಪ್ರತಿಷ್ಠಾಪಿಸಿರುವುದು.
Published on

ಕಂಪ್ಲಿ: ಹೋಳಿ ಅಂಗವಾಗಿ ಪಟ್ಟಣ ಸೇರಿ ತಾಲೂಕಿನಲ್ಲಿ 12 ಕಡೆ ಸೋಮವಾರ ಮನ್ಮಥ, ರತಿದೇವಿಯ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿನ ಶ್ರೀನೀಲಕಂಠೇಶ್ವರ ದೇವಸ್ಥಾನದಲ್ಲಿ, ದೇವಾಂಗಪೇಟೆಯ ಮಡ್ಡಿಕಟ್ಟೆ, ವೀರತ್‌ಪೇಟೆ ಬಸವೇಶ್ವರ ದೇವಸ್ಥಾನ, ಮೇಲ್ಗಡೆ ಪೇಟೆ ಬನಶಂಕರಿ ಗುಡಿ, ಪೇಟೆ ಬಸವೇಶ್ವರ ತೇರಿನ ಮನೆ, ಕೋಟೆ ವೀರಭದ್ರೇಶ್ವರ ಗುಡಿ, ಅಮೃತಶಿಲಾ ರಾಮಚಂದ್ರ ಗುಡಿ, ಆದೋನಿ ಮಸೀದಿ ಬಳಿಯ ಗುಗ್ರಿಕಟ್ಟೆ, ಸಕ್ಕರೆ ಕಾರ್ಖಾನೆ ಪ್ರದೇಶಗಳಲ್ಲಿ, ತಾಲೂಕಿನ ರಾಮಸಾಗರ ನಂ.10ಮುದ್ದಾಪುರ, ರಾಮಸಾಗರ ಗ್ರಾಮಗಳಲ್ಲಿ ಸೇರಿ ಕಂಪ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ 12 ಕಡೆಗಳಲ್ಲಿ ಮನ್ಮಥ, ರತಿದೇವಿಯ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗಿದೆ. ಮಂಗಳವಾರ ಹೋಳಿ ಹುಣ್ಣಿಮೆಯಂದು ಪ್ರತಿಮೆಗಳ ಮೆರವಣಿಗೆ ನಡೆಯಲಿದೆ. ನಂತರ ಮಧ್ಯರಾತ್ರಿ ಮನ್ಮಥ ಮತ್ತು ರತಿಯರನ್ನು ದಹಿಸಲಾಗುತ್ತದೆ. ಬುಧವಾರ ಹೋಳಿ ಬಣ್ಣದಾಟ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net