

ಕಂಪ್ಲಿ: ಪಟ್ಟಣದ ನಂ.10 ಮುದ್ದಾಪುರ ರಸ್ತೆಯ ವಿಜಯನಗರ ಕಾಲುವೆ ದಡದ ಕಾಶಿಭಾವಾಜಿ ಮಠದಲ್ಲಿ ಭಾನುವಾರ ಕಾಶಿ ಬಾವಾಜಿ ತಾತ ಹಾಗೂ ಕಂಪ್ಲಿ ಕಲ್ಮಠದ ಶ್ರೀ ಮ.ನಿ.ಪ್ರ. ಪ್ರಭುಮಹಾಸ್ವಾಮಿಗಳ ಪುಣ್ಯ ಸ್ಮರಣೋತ್ಸವ, ಲೋಕ ಕಲ್ಯಾಣಾರ್ಥ ಮಹಾರುದ್ರಯಾಗ ಸೇರಿ ನಾನಾ ಧಾರ್ಮಿಕ ಕಾರ್ಯಗಳು ಜರುಗಿದವು.
ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು ಯಾಗಕ್ಕೆ ಚಾಲನೆ ನೀಡಿದರು. ಹುಡಾದ ಅಮರೇಶ್ವರ ಶಾಸ್ತ್ರಿಗಳ ಪೌರೋಹಿತ್ಯದಲ್ಲಿ ಯಾಗ ಸೇರಿ ನಾನಾ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು. ಕಾಶಿಬಾವಾಜಿ ಮಠದ ವ್ಯವಸ್ಥಾಪಕ ಪಿ.ಎಂ. ಮಲ್ಲಿಕಾರ್ಜುನಸ್ವಾಮಿ ಸೇರಿ ವಿವಿಧೆಡೆಯ ಸದ್ಭಕ್ತರು ಪಾಲ್ಗೊಂಡಿದ್ದರು.