ಸ್ಥಳ ಪರಿಶೀಲಿಸಿ ಜಿಪಿಎಸ್ ಮಾಡಿ

Kampli manavi
ಕಂಪ್ಲಿಯಲ್ಲಿ ತಹಸೀಲ್ದಾರ್ ಶಿವರಾಜಗೆ ಭೂಮಿ ವಸತಿ ಹೋರಾಟ ಸಮಿತಿ ಸದಸ್ಯರು ಮನವಿ ಸಲ್ಲಿಸಿದರು. ಪ್ರಮುಖರಾದ ವಸಂತರಾಜ ಕಹಳೆ, ಕರಿಯಪ್ಪ ಗುಡಿಮನಿ, ಕೆ.ನೀಲಪ್ಪ ಪೇಂಟರ್, ಎಚ್.ಮಹೇಶ, ಈ.ಧನಂಜಯ ಇತರರಿದ್ದರು.
Published on

ಕಂಪ್ಲಿ: ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿದ ಸಾಗುವಳಿದಾರರ ಭೂಮಿಯನ್ನು ನಿಯಮಾನುಸಾರ ಪರಿಶೀಲನೆ ಮಾಡುವಂತೆ ಒತ್ತಾಯಿಸಿ ಭೂಮಿ ವಸತಿ ಹೋರಾಟ ಸಮಿತಿ ಸದಸ್ಯರು ಶುಕ್ರವಾರ ತಹಸೀಲ್ದಾರ್‌ಎಸ್.ಶಿವರಾಜಗೆ ಮನವಿ ಸಲ್ಲಿಸಿದರು.

ರಾಜ್ಯ ಸಮನ್ವಯ ಸಮಿತಿ ಸದಸ್ಯ ವಸಂತರಾಜ ಕಹಳೆ ಮಾತನಾಡಿ, ಸರ್ಕಾರಿ ಭೂಮಿಯಲ್ಲಿ ಕೃಷಿ ಮಾಡಿಕೊಂಡ ರೈತರು ಅಕ್ರಮ ಸಕ್ರಮಕ್ಕಾಗಿ ನಮೂನೆ-57ರಲ್ಲಿ ಅರ್ಜಿ ಸಲ್ಲಿಸಿದ್ದು, ಜಿಪಿಎಸ್ ಪರಿಶೀಲನೆಗೊಳಪಡಿಸುವ ಕ್ರಿಯೆ ಆರಂಭಿಸಬೇಕು.

ಅರ್ಜಿದಾರನ ಸಾಗುವಳಿಯ ಸರ್ವೇ ನಂಬರ್ ಸ್ಥಳ ಪಂಚನಾಮೆ ಮಾಡುವಾಗ ಸಾಗುವಳಿದಾರನ ಹೆಸರು, ಹಾಲಿ ಬೆಳೆ ನಮೂದಿಸುವಲ್ಲಿ ಅಧಿಕಾರಿಗಳು ಜಾಗ್ರತೆವಹಿಸಬೇಕು. ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ, ಜಿಲ್ಲಾಡಳಿತಕ್ಕೆ ಕ್ರಮಬದ್ಧ, ನ್ಯಾಯಯುತ ವರದಿ ಸಲ್ಲಿಸಬೇಕು. ಕಾಲಮಿತಿಯೊಳಗೆ ನಿಯಮಾನುಸಾರ ಸ್ಥಳ ಪರಿಶೀಲಿಸಿ ದಾಖಲಿಸುವಂತೆ ಒತ್ತಾಯಿಸಿದರು.

ಪದಾಧಿಕಾರಿಗಳಾದ ಕರಿಯಪ್ಪ ಗುಡಿಮನಿ, ಕೆ.ನೀಲಪ್ಪ ಪೇಂಟರ್, ಎಚ್.ಮಹೇಶ, ಈ.ಧನಂಜಯ, ಎಂ.ಹನುಮಂತ, ಎಚ್.ಶ್ರೀನಿವಾಸ, ಎಚ್.ಬಸಪ್ಪ, ಬಿ.ಶ್ರೀಕಾಂತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net