ಲಿಂಗಾಯತರು ಭಿನ್ನಾಭಿಪ್ರಾಯ ತೊರೆಯಲಿ

15052022 Kampli Lingayata samavesha
Published on

ಹರಗಿನಡೋಣಿ ಪಂಚವಣಿಗಿ ಸಂಸ್ಥಾನ ಹಿರೇಮಠದ ಅಭಿನವ ಸಿದ್ಧಲಿಂಗ ಸ್ವಾಮೀಜಿ ಸಲಹೆ

ಕಂಪ್ಲಿ: ವೀರಶೈವ ಲಿಂಗಾಯತರು ಭಿನ್ನಾಭಿಪ್ರಾಯ ತೊರೆದು ಸಂಘಟಿತರಾದಲ್ಲಿ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳಲು ಸಾಧ್ಯ ಎಂದು ಹರಗಿನಡೋಣಿ ಪಂಚವಣಿಗಿ ಸಂಸ್ಥಾನ ಹಿರೇಮಠದ ಅಭಿನವ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ತಾಲೂಕಿನ ಮೆಟ್ರಿ ಗ್ರಾಮದ ವಿಶ್ವಾರಾಧ್ಯ ಗುರುಕುಲ ಮಠದ ಪ್ರಣವಜ್ಯೋತಿ ಮಹಾಕ್ಷೇತ್ರದಲ್ಲಿ ಭಾನುವಾರ ವೀರಶೈವ ಲಿಂಗಾಯತ ಯುವ ಸೇವಾ ಸಂಘಕ್ಕೆ ಚಾಲನೆ ನೀಡಿ ಮಾತನಾಡಿದರು. ವೀರಶೈವ ಲಿಂಗಾಯತರೆಲ್ಲರೂ ಲಿಂಗ ಪೂಜಾರಾಧಕರಾಗಿದ್ದರಿಂದ ಧರ್ಮಾನುಚರಣೆ, ಸಂಸ್ಕಾರ, ಆಚಾರ-ವಿಚಾರ ಮತ್ತು ದೈವವೂ ಒಂದೇ ಆಗಿದೆ. ಇಲ್ಲಿ ಶ್ರೇಷ್ಠ- ಕನಿಷ್ಠಗಳಿಲ್ಲ. ಮಕ್ಕಳಿಗೆ ಬಾಲ್ಯದಲ್ಲಿಯೇ ವೀರಶೈವರೆಲ್ಲರೂ ಒಂದೆಂಬ ಪರಿಕಲ್ಪನೆ ಮೂಡಿಸುವಲ್ಲಿ ತಂದೆ-ತಾಯಿಗಳು ಶ್ರಮಿಸಬೇಕು ಎಂದರು. ಜೂ. 6ರಂದು ಗ್ರಾಮದಲ್ಲಿ ಲಿಂಗಧಾರಣೆ ಮತ್ತು ಇಷ್ಟಲಿಂಗ ಪೂಜೆ ಹಮ್ಮಿಕೊಳ್ಳಲಾಗಿದೆ ಎಂದರು.

ಶ್ರೀ ಮಠದ ಎಚ್.ಎಂ. ವಿಶ್ವೇಶ್ವರಯ್ಯ ಸ್ವಾಮೀಜಿ, ವೀರಶೈವ ಲಿಂಗಾಯತ ಯುವ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಹೊಸಕೋಟೆ ಜಗದೀಶ್, ಪ್ರಮುಖರಾದ ಮಲ್ಲಯ್ಯ ಆರ್.ಮಠ, ಎಚ್.ಎಂ. ಮಹೇಶ್ ಸ್ವಾಮಿ, ಎಚ್.ಜಡೆಪ್ಪ, ಜವುಕು ನಾಗರೆಡ್ಡಿ, ಎಚ್. ಸಂತೋಷ ಕುಮಾರ್, ಎನ್. ನಾಗರಾಜ ಅವರು ವೀರಶೈವ ಸಂಘಟನೆ ಕುರಿತು ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net