ಲಿಂಗದೀಕ್ಷೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರೇಮಿಗಳು, ಮದುವೆಗೆ ಸಾಕ್ಷಿಯಾದ ನಾಗಭೂಷಣ ಶಿವಾಚಾರ್ಯರು

Kampli Shivacharya Swamiji Lingadeksha
ಕಂಪ್ಲಿಯ ಪಾಠಶಾಲೆಯಲ್ಲಿ ಹೆಬ್ಬಾಳ್ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು ಶುಕ್ರವಾರ ಪ್ರೇಮಿಗಳಿಗೆ ಲಿಂಗದೀಕ್ಷೆ ನೀಡಿದರು.
Published on

ಕಂಪ್ಲಿ: ಪರಸ್ಪರ ಪ್ರೀತಿಸಿದ್ದ ಪ್ರೇಮಿಗಳಿಬ್ಬರು ಶುಕ್ರವಾರ ಲಿಂಗದೀಕ್ಷೆ ಪಡೆದು ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪಟ್ಟಣದ ಪಾಠಶಾಲೆಯಲ್ಲಿ ಗವಿಸಿದ್ದಯ್ಯ, ವಿನೂತಾಗೆ ಹೆಬ್ಬಾಳ್ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು ಲಿಂಗದೀಕ್ಷೆ ನೀಡಿದರು. ಬಳಿಕ ವೀರಶೈವ ಪದ್ಧತಿಯಂತೆ ವಿವಾಹ ನೆರವೇರಿಸಲಾಯಿತು.

ಈ ವೇಳೆ ಶ್ರೀಗಳು ಮಾತನಾಡಿ, ಆಧುನಿಕತೆ ನೆಪದಲ್ಲಿ ಮನುಷ್ಯ ಧರ್ಮ, ಸಂಸ್ಕಾರಗಳಿಂದ ವಿಮುಖರಾಗಬಾರದು. ಎಲ್ಲ ಧರ್ಮ, ಜಾತಿಗಳು ಸಮವಾಗಿದ್ದು, ಅವರವರ ಧರ್ಮ, ಸಂಸ್ಕಾರ, ಆಚಾರ ವಿಚಾರಗಳನ್ನು ಅರಿತು ಪರಿಪಾಲಿಸಬೇಕು. ಜತೆಗೆ ಮಾನವೀಯ ಮೌಲ್ಯಗಳಿಂದ ದೂರವಾಗಬಾರದು ಎಂದು ತಿಳಿಸಿದರು. ಪಾಠಶಾಲೆ ಪ್ರಾಚಾರ್ಯ ಎಂ.ಎಸ್.ಶಶಿಧರ ಶಾಸ್ತ್ರಿ, ಪ್ರಮುಖರಾದ ಘನಮಠದಯ್ಯ ಹಿರೇಮಠ, ವೀರಯ್ಯಸ್ವಾಮಿ ಸಾಲಿಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net