ಮಕ್ಕಳು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲಿ

Kampli Sports
ಕಂಪ್ಲಿಯಲ್ಲಿ ವಲಯ-2ರ ಕ್ರೀಡಾಕೂಟವನ್ನು ತಹಸೀಲ್ದಾರ್ ಎಸ್.ಶಿವರಾಜ ಕ್ರೀಡಾಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಪ್ರಮುಖರಾದ ಎಂ.ರೇವಣ್ಣ, ವಿ.ಆರ್.ಮೂರ್ತಿ, ಕೆ.ಎಸ.ಮಲ್ಲನಗೌಡ, ಸುಜಾತಾ, ಎಂ.ಎ.ನಾಗನಗೌಡ ಇತರರಿದ್ದರು.
Published on

ಕಂಪ್ಲಿ: ಇಲ್ಲಿನ ಷಾ.ಮಿಯಾಚಂದ್ ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿ ವಲಯ-2ರ ಕ್ರೀಡಾಕೂಟ ನಡೆಯಿತು.

ಕ್ರೀಡಾಕೂಟದ ಅಧ್ಯಕ್ಷ ಎಂ.ರೇವಣ್ಣ ಮಾತನಾಡಿ, ಮಕ್ಕಳು ನಿತ್ಯ ಪಠ್ಯದೊಡನೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು. ಕ್ರೀಡಾ ಮನೋಭಾವ ಜಾಗೃತಿಗೊಳಿಸಲು ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ ಎಂದರು.

ತಹಸೀಲ್ದಾರ್ ಎಸ್.ಶಿವರಾಜ್ ಮಾತನಾಡಿ, ನಿತ್ಯ ಕ್ರೀಡಾಭ್ಯಾಸದಿಂದ ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಬಹುದು ಎಂದರು. 35 ಶಾಲೆಗಳ 500ಕ್ಕೂ ಹೆಚ್ಚು ಮಕ್ಕಳು ವೈಯಕ್ತಿಕ ಮತ್ತು ಗುಂಪು ಆಟಗಳಲ್ಲಿ ಪಾಲ್ಗೊಂಡಿದ್ದರು.

ಕ್ರೀಡಾಕೂಟದ ಕಾರ್ಯದರ್ಶಿ ವಿ.ಆರ್.ಮೂರ್ತಿ, ಪ್ರಮುಖರಾದ ಕೆ.ಶಿಕುಮಾರ್, ಸುಜಾತಾ, ಎಂ.ಎ.ನಾಗನಗೌಡ, ಹನುಮಂತಪ್ಪ, ಕೆ.ಎಸ್.ಮಲ್ಲನಗೌಡ, ಮಂಜುನಾಥ, ರೇಣುಕಾರಾಧ್ಯ, ಹನುಮಂತಪ್ಪ, ಭೂಮೇಶ್ವರ, ಜಿ.ವೀರೇಶ, ಟಿ.ಎಂ.ಬಸವರಾಜ, ಅಶೋಕ ರೆಡ್ಡೇರ, ಎಚ್.ದೊಡ್ಡಬಸಪ್ಪ, ಜೋಗಿನಾಯ್ಕ ರುದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net