ಕುಂಟಮ್ಮ, ದುರುಗಮ್ಮ ದೇವಿ ಪಲ್ಲಕ್ಕಿ ಉತ್ಸವ ಅದ್ದೂರಿ

13052022 Kampli Devi
Published on

ಕಂಪ್ಲಿ: ಬೆಳಗೋಡ್‌ಹಾಳ್ ಆರಾಧ್ಯ ದೇವತೆಗಳಾದ ಕುಂಟಮ್ಮ ದೇವಿ ಹಾಗೂ ದುರುಗಮ್ಮ ದೇವಿಯ ಪಲ್ಲಕ್ಕಿ ಮಹೋತ್ಸವ ಹಾಗೂ ಪಂಚಲೋಹ ಮೂರ್ತಿಗಳ ಗಂಗೆಸ್ಥಳ ಕಾರ್ಯಕ್ರಮ ಶುಕ್ರವಾರ ಶ್ರದ್ಧಾ ಭಕ್ತಿಗಳಿಂದ ಜರುಗಿದವು.

ಸಾಂಗತ್ರಯ ಸಂಸ್ಕೃತ ಪಾಠಶಾಲೆ ಗೌರವ ಪ್ರಾಚಾರ್ಯ ಎಂ.ಎಸ್.ಶಶಿಧರ ಶಾಸ್ತ್ರಿ ಪೌರೋಹಿತ್ಯದಲ್ಲಿ ಹೋಮ ಹವನಾದಿ ಕಾರ್ಯಕ್ರಮಗಳು ಜರುಗಿದವು. ದೇವಿಯರ ಪ್ರತಿಮೆಗಳನ್ನು ಫಲಪುಷ್ಪಾದಿಗಳಿಂದ ಅಲಂಕರಿಸಲಾಗಿತ್ತು. ಗ್ರಾಮದ ಸರ್ವ ಸಮುದಾಯದವರು ಪೂಜಿಸಿ ಎಡೆ ಸಲ್ಲಿಸಿದರು. ಛಲವಾದಿ ಮಹಾಸಭಾದ ಗ್ರಾಮ ಅಧ್ಯಕ್ಷ ಎಸ್.ರಾಮಪ್ಪ, ಗ್ರಾಪಂ ಉಪಾಧ್ಯಕ್ಷ ಟಿ.ದುರುಗಪ್ಪ, ಸದಸ್ಯ ಚಂದ್ರಶೇಖರಗೌಡ, ಪ್ರಮುಖರಾದ ಆಲೂರು ಈರಣ್ಣ, ಸಂಗ್ಟಿ ಹನುಮಂತಪ್ಪ, ಗಚ್ಚಿನಮನಿ ವೀರೇಶಪ್ಪ, ಸಂಗ್ಟಿ ವಿರುಪಣ್ಣ, ಹಾಲಹರವಿ ಗಾದಿಲಿಂಗಪ್ಪ, ಜಾಲಿಬೆಂಚಿ ಹೊನ್ನೂರಪ್ಪ ಸೇರಿ ಸರ್ವ ಸಮುದಾಯದವರು ಶ್ರದ್ಧಾಭಕ್ತಿಗಳಿಂದ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net